ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

pic:chat gpt


ವಸಾಹತುಷಾಹಿ ಮನಕೆ
ಹೆಣ್ಣು ಹೊನ್ನು ಮಣ್ಣನು
ಬೆದರಿಕೆಯ ಕಪಿಮುಷ್ಠಿಯಲಿ
ಪಡೆಯುವ
ಬಯಕೆ…!!!!

ಯಜಮಾನಿಕೆಯ ಎದೆಗೆ
ಬಂದೂಕಿನಲಿ
ಗುಲಾಮಗಿರಿಯ
ಮೊಳಗಿಸಿ
ಸರ್ವಾಧಿಕಾರಿ ಮೃಗಗಳ
ದಹಿಸುವ
ಕನವರಿಕೆ…!!!!

 ಮುಗ್ದರ ಉಸಿರು ನಿಲ್ಲಿಸುವ
ರಾಕ್ಷಸರಿಗೆ
ತೈಲದ ಏಕಸ್ವಾಮ್ಯದ
ಸಾಮ್ರಾಜ್ಯವ
ಸ್ಥಾಪಿಸಿ
ಜಗತ್ತನ್ನಾಳುವ
ಹೆಬ್ಬಯಕೆ….!!!!

ಮನುಷ್ಯತ್ವವ
ಮಣ್ಣು ಮಾಡಿ
ಮಾನವೀಯತೆಯ
ರಕ್ತವನು ಹೀರಿ
ಬಂಡವಾಳಶಾಹಿಯ
ಕತ್ತಿಯಲಿ
ಪರರ ಭೂಮಿಯನ್ನು
ಆಕ್ರಮಿಸುವ
ಕನಲಿಕೆ….!!!!

ಮುಗ್ದ ಜೀವಗಳ
ಉಸಿರು ನಿಲ್ಲಿಸಿದ
ಮೃಗವು ಕೂಡ
ಕೊನೆಯಲ್ಲಿ ಉಸಿರು
ಚೆಲ್ಲಿ
ಶವವಾಗಿ ಬಿಳುವೆನೆಂಬ
ಸಹಜ ಜ್ಞಾನವು

ಸರ್ವಾಧಿಕಾರಿ
ಮೃಗಕೆ ಇಲ್ಲದಿರುವುದು
ವಿಪರ್ಯಾಸ;
ಕಾಲನ ಕರೆಗೆ
ತಪ್ಪಿಸಿಕೊಳ್ಳಲಾಗಲ್ಲ
ಆ ದೃಷ್ಟ
ಅಧ್ಯಕ್ಷ …!!


About The Author

Leave a Reply

You cannot copy content of this page

Scroll to Top