ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹೊಳೆಸಾಲ ಬಳ್ಳಿ ಚೆಂದ
ಹಳ್ಳಿಯ ನೆಲ ಅಂದ
ಮಣ್ಣಿನ ವಾಸನೆಯ ಕಂಪು
ಬಲು ಚೆಂದ ಕೇಳವ್ವ

ಹಸಿರು‌ ಬೊಟ್ಟಿನ ಸೀರೆ
ಅಚ್ಚ ಕೆಂಪಿನ ಬಳೆ
ತೊಟ್ಟಾಳ ನನ್ನವ್ವ
ನಿಂತಾಳ ಬಳ್ಳಿಯಲಿ

ಪುಂಡಿಯ ಪಲ್ಲೆಯಲಿ
ಬಳ್ಳೊಳ್ಳಿ ಕಾರದಲಿ
ಎಣ್ಣೆ  ಉಳ್ಳಾಗಡ್ಡಿ ರುಚಿ ಚೆಂದ
ಹೊಳೆಸಾಲ ಬಳ್ಳಿಯಲಿ

ಹೊಳೆಸಾಲ ಬಳ್ಳಿಯಲಿ ಬಣ್ಣಬಣ್ಣದ ಹೂಗಳು
ನಮ್ಮವ್ವ ಮುಡಿದ ಮಲ್ಲಿಗೆ ಹೂ ಚೆಂದ
ಹಣಿಯಲಿ ವಿಭೂತಿ ಕೆಂಪುಬೊಟ್ಟಿನ ಗಂದ
ಹೊಳೆಸಾಲದಬಳ್ಳಿಯಲಿ ನಮ್ಮವ್ವನ ಕಳೆ ಚೆಂದ


About The Author

1 thought on “ಡಾ. ದಾನಮ್ಮ ಝಳಕಿ “ಹೊಳೆಸಾಲು ಬಳ್ಳಿ””

Leave a Reply

You cannot copy content of this page

Scroll to Top