ಕಾವ್ಯ ಸಂಗಾತಿ
ಮನ್ಸೂರ್ ಮುಲ್ಕಿ
“ಆ ರಾತ್ರಿ”


ಆ…. ರಾತ್ರಿ… ಯಾಕೇ… ಹೀಗೆ
ಕಡಲ ತೆರೆಯ ಶಬ್ದದ ಹಾಗೆ….
ತೆರೆಯನೊರೆಯು ತಟವ ಸೇರಿದ ಹಾಗೆ..
ಕತ್ತಲೆಯಲ್ಲಿ ಮೌನವೇ ಮಾತಾಡಿದ ಹಾಗೆ
ನಿನ್ನ ಕಣ್ಣೊಳಗಿನ ಬೆಳಕಿನಲಿ
ನನ್ನ ಕನಸು ಕರಗಿದ ಹಾಗೆ
ತುಟಿಗಳ ಅಂಚಿನ ನಗುವಿನಲಿ
ನನ್ನ ಮನಸು ನಾಚಿದ ಹಾಗೆ
ನಿನ್ನ ಉಸಿರಿನ ಬೆಚ್ಚನೆಯಲಿ
ನಾ ನನ್ನ ಮರೆತ ಹಾಗೆ
ನಿನ್ನ ಹೃದಯದ ಬಡಿತಕೆ
ನನ್ನ ಹೃದಯ ನೃತ್ಯ ಮಾಡಿದ ಹಾಗೆ
ನಿನ್ನ ಬೆರಳ ಬಂಧನದಲ್ಲಿ
ನನ್ನ ಅಲಂಕಾರ ಕಂಡ ಹಾಗೆ
ನಿನ್ನ ಎದೆಗೆ ತಲೆಬಾಗಿ
ನನ್ನುಸಿರನು ಚೆಲ್ಲಿದ ಹಾಗೆ
ನಿನ್ನ ತುಟಿಗಳ ಮೌನ
ನನ್ನೊಡಲ ಮಧುರತೆಯ ಹಾಗೆ
ಈ ಪ್ರೀತಿಯ ರಾತ್ರಿಯ ಅಂಗಳದಲ್ಲಿ
ನಿನ್ನಲ್ಲಿ ನಾನು ಲೀನವಾದ ಹಾಗೆ.
ಮನ್ಸೂರ್ ಮುಲ್ಕಿ



