ಕಾವ್ಯ ಸಂಗಾತಿ
ರಾಜೇಶ್ವರಿ ಎಸ್ ಹೆಗಡೆ
“ಸಗ್ಗದ ಸಂಕ್ರಾಂತಿ”


ಮಾಗಿಯ ಚಳಿಯಲ್ಲಿ
ಅಂಗಳಕೆ ನೀರೆರೆದು
ಚಿತ್ತಾರವ ಬಿಡಿಸುತ್ತಾ
ಮಾಧವನ ನೆನೆನೆನೆದು
ಸುಗ್ಗಿ ಸಂಭ್ರಮದಿ ಮುಳುಗುವುದು.
ವರುಷಕ್ಕೊಮ್ಮೆ ಹರುಷ
ತರುವ ಸಂಕ್ರಮಣವು
ಎಳ್ಳಹೋಳಿಗೆ ಮಾದಲಿ ತಿನಿಸಿ
ಭೂರಿಭೋಜನ ಉಣಿಸುವುದು
ಸಂಕ್ರಾಂತಿ ಸಂಭ್ರಮದಿ ಮುಳುಗುವುದು.
ರೈತನ ಫಸಲಿಗೆ ಭಕ್ತಿಯಿಂ ನಮಿಸಿ
ರಾಸುಗಳಿಗೆ ಗೆಜ್ಜೆಕಟ್ಟಿ ಸಿಂಗರಿಸಿ
ಜನಪದ ಸೊಗಡ ಎಲ್ಲೆಡೆ ಬೀರಿ
ಭೂತಾಯಿ ಪೂಜೆ ಮಾಡುವೆವು
ಸಂಕ್ರಾಂತಿ ಹರುಷದಿ ಮುಳುಗುವುದು
ವರುಷದ ಮೊದಲ ಹಬ್ಬ
ಉತ್ತರಾಯಣ ಆರಂಭ
ಸೂರ್ಯನ ಪಥ ಸಂಚಲನ
ಮಕರ ರಾಶಿಗೆ ಸಾಗುವ ನೇಸರ
ಸಂಕ್ರಾಂತಿ ಹರುಷ ತುಂಬುವನು.
ರವಿಯ ಕಾಂತಿ ಹೊಳೆಯಲು
ಮನಕೆ ಶಾಂತಿ ಮೂಡಲು
ಕ್ರಾಂತಿ ಬ್ರಾಂತಿ ಹೊರದೂಡಿ
ಹೊಸತನದ ಕಳೆ ಕಾಣುವೆವು
ಮಕರ ಸಂಕ್ರಾಂತಿಲಿ ಮುಳುಗುವುದು.
ಎಳ್ಳು ಬೆಲ್ಲದ ಸಿಹಿ ಜೆಗೆದು
ಕಬ್ಬಿನ ರಸವನು ಕುಡಿದು
ಹುಗ್ಗಿಯ ಸವಿ ಸವಿದು
ಹೊಲದಲಿ ಊಟ ಮಾಡುವೆವು
ಸಗ್ಗದ ಸಂಕ್ರಾಂತಿಲಿ ಮುಳುಗುವುದು.
ರಾಜೇಶ್ವರಿ ಎಸ್ ಹೆಗಡೆ.



