ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ಗಜಲ್


ಗಜಲ್
(ಮಧುಸೂದನ್ ಸರ್ ಅವರ “ಖಾಲಿ ಮಾತಿನ ಜೋಳಿಗೆ” ಸಾಲಿನಿಂದ ಪ್ರೇರಿತ)
ಭಾವನೆಗಳಿಲ್ಲದ ಮಾತಿನ ಜೋಳಿಗೆ
ಜೊಳ್ಳಾದ ನಿನ್ನ ಮನಸಿನ ಜೋಳಿಗೆ
ಪ್ರೀತಿಯೂ ನೀಡದ ಬಡತನ ನಿನಗೆ
ಕರಗದೆದೆಯು ಕಡುಗಪ್ಪಿನ ಜೋಳಿಗೆ
ಸಿರಿತನವಿಲ್ಲದ ಮನೆಗೆ ನೀ ಒಡೆಯ
ನಗುವೂ ನೀಡದ ನಿನ್ನೆನಪಿನ ಜೋಳಿಗೆ
ಅದೆಂತಹ ಬರಡು ಭೂಮಿ ನೀನು
ತೃಷೆಗೂ ಬರಗಾಲ ನಿನ್ನಿಲುವಿನ ಜೋಳಿಗೆ
ಬಾಳು ಬರಿದಾಗಿಸಿಕೊಂಡಳು ನಿನಗಾಗಿ ವಾಣಿ
ಆದರೂ ಜಿನುಗದ ನಿನ್ನೊಲವಿನ ಜೋಳಿಗೆ
ವಾಣಿ ಯಡಹಳ್ಳಿಮಠ




