ಕಾವ್ಯ ಸಂಗಾತಿ
ರಾಶೇ ಬೆಂಗಳೂರು-
“ಹಕ್ಕಿ ಹಾಡುತಿದೆ”

ಅದೇನು ಜಾನಪದವೋ
ಗೀಗಿ ಪದಗಳ ಪುಂಜವೋ
ಸರ್ವಜ್ಞನ ತತ್ವ ಪದವೋ
ನಾ ಹಕ್ಕಿ ಹಾಡುತಿರುವೆ..
ಅಲ್ಲೊಂದು ಗ್ರಾಸವಿದೆ
ಸುಜ್ಞಾನದ ಸೋಜಿಗವಿದೆ
ಅಜ್ಞಾನದ ವಿಷಾದವಿದೆ ಆದರು ನಾ ಹಾಡುತಿರುವೆ..
ನನ್ನ ಮೇಲೆ ದ್ವೇಷವಿದೆ
ಮನುಜ ಸ್ವಾರ್ಥಕ್ಕೆ ಕೋಪವಿದೆ
ನನ್ನ ಗೂಡ ರಕ್ಷಿಸಕೊಳ್ಳಬೇಕಿದೆ
ಆದರು ಹಾಡಲೇನಿದೆ..
ಆಶ್ರಯಕಾಗಿ ಅಲೆವ ಗುಬ್ಬಿ ನಾ
ಸ್ವಾರ್ಥವಿಲ್ಲದ ಜೀವ ನಾ
ಭುವಿ ಮೇಲಿನ ಸಣ್ಣ ಹನಿ ನಾ
ಆದರೂ ಹಾಡುತಲೇ ಇರುವೆ..
————-
ರಾಶೇಬೆಂಗಳೂರು




