ಕಾವ್ಯ ಸಂಗಾತಿ
ಗೀತಾ ಆರ್ ಅವರ ಕವಿತೆ
“ನಿನ್ನ ನಯನ”


ಸಂಭಾಷಣೆ ಸಮ್ಮಿಲನ ನಿನ್ನ ಆ
ನಯನಗಳಲ್ಲಿ…
ಆಡದೇ ಉಳಿದಿರುವ ಮಾತು
ಸಾವಿರಾರು….
ನಿರ್ಮಿಸಿರುವೆ ಮನದೊಳಗೊಂದು
ವೇದಿಕೆ ನಿನಗಾಗಿ…
ನಾನಂದು ಅಗಲಿಕೆ ನೋವಿನಲ್ಲೂ
ಅರಸುತ್ತಿದೆ ನಿನ್ನ ಇರುವಿಕೆ…
ಮಾಸಾದಿದ್ದ ನಿನ್ನ ನೆನಪುಗಳೆಲ್ಲಾ
ಮರೀಚಿಕೆಯಾಯಿತು….
ಎಲೆ ಮರೆಯ ಕಾಯಿಯಂತೆ ಅದು
ಕಾಣದಾಯಿತು…
ನಾನೆಲ್ಲೋ ನೀನೆಲ್ಲೋ ಬದುಕಿನ
ಬಾಳಾಪಯಣದಲೀ….
ನೀನ್ಯಾರೋ ನಾನ್ಯಾರೋ ಊರ
ದಾರಿಯಲ್ಲಿ….
ವರುಷ ಉರುಳಿತು ಮಾಸ ಕಳೆಯಿತು
ತಡೆವರಾರು ಕಾಲಾವ….
————
ಗೀತಾ ಆರ್.



