ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಜೆ. ಜಯಲಲಿತಾ ಅವರು ತಮಿಳುನಾಡಿನ ಎರಡನೇ ಮಹಿಳಾ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕಿ ಮತ್ತು ಚಲನ  ಚಿತ್ರ ನಟಿಯಾಗಿದ್ದರು. ಇವರು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ ಜನಿಸಿದರು. ಇವರ ತಂದೆ ಜಯರಾಮ್ ತಾಯಿ ಸಂಧ್ಯಾ. ಇವರ ತಂದೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಜಯಾ ಅವರು ಎರಡು ವರ್ಷದವರಿದ್ದಾಗ ತಂದೆಯವರು ತೀರಿಕೊಂಡರು. ತಂದೆಯ ಮರಣದ ನಂತರ ಇವರ ತಾಯಿಯು ತವರು ಮನೆಗೆ ಮರಳಿದರು. ಜಯಾ ಅವರು ಅಜ್ಜ ಅಜ್ಜಿಯ ಹತ್ತಿರ ಬಿಷಪ್ ಕಾಟನ್ ಗರ್ಲ್ಸ್ನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಪಡೆದರು. ಶಿಕ್ಷಣ ಪಡೆಯುವ ಸಮಯದಲ್ಲಿ ಸಂಗೀತ ಮತ್ತು ಭರತನಾಟ್ಯದಲ್ಲಿ ತರಬೇತಿಯನ್ನು ಪಡೆದರು.

೧೯೬೦ ರಲ್ಲಿ ಭರತನಾಟ್ಯ ಕಲಾವಿದೆಯಾಗಿ ರಂಗಪ್ರವೇಶ ಮಾಡಿದರು. ೧೯೬೧ರಲ್ಲಿ ಕನ್ನಡದ ‘ಶ್ರೀಶೈಲ ಮಹಾತ್ಮೆ’ ಸಿನೆಮಾದಲ್ಲಿ ಬಾಲನಟಿಯಾಗಿ ಅಭಿನಯಿಸಿದರು. ಬಿ ಆರ್ ಪಂತಲು ಅವರ ‘ಚಿನ್ನದ ಗೊಂಬೆ’ ಚಿತ್ರದಲ್ಲಿ ಕಲ್ಯಾಣ್ ಕುಮಾರ್ ಜೊತೆ ನಟಿಸಿದರು. ೧೯೬೫ರಲ್ಲಿ ‘ವೆನ್ನಿರ ಅಡೈ’ ಚಿತ್ರದ ಮೂಲಕ ತಮಿಳು ಸಿನೆಮಾ ರಂಗ ಪ್ರವೇಶಿಸಿದರು. ೧೯೬೪ ರಿಂದ ೧೯೭೧ರ ಅವಧಿಯಲ್ಲಿ ಎಂ ಜಿ ರಾಮಚಂದ್ರನ್ ಜೊತೆ ೨೦ ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿದರು. ಜಯಲಲಿತಾ ಅವರು ೧೪೦ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿದರು.

ಜಯಲಲಿತಾ ಅವರ ೧೯೭೨ ರಲ್ಲಿ ರಾಜಕೀಯ ಪ್ರವೇಶ ಪಡೆದರು. ೧೯೮೦ರಲ್ಲಿ ಜಯಲಲಿತಾರವರನ್ನು ಎಂ ಜೆ ರಾಮಚಂದ್ರನ್ ಅವರು ಮುಖ್ಯಮಂತ್ರಿಯಾಗಿದ್ದಾಗ ಪಕ್ಷದ ಪ್ರಚಾರ ಕಾರ್ಯದರ್ಶಿಯಾಗಿ ನೇಮಿಸಿದರು. ನಂತರ ೧೯೮೪ರಲ್ಲಿ ರಾಜ್ಯ ಸಭೆಗೆ ಆಯ್ಕೆಯಾದರು. ಆಗ ಸಂಸತ್ತಿನಲ್ಲಿ ನಿರರ್ಗಳವಾಗಿ ಮಾತನಾಡಿ ಆಗಿನ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರ ಮೆಚ್ಚುಗೆಯನ್ನು ಪಡೆದರು. ನಂತರದ ದಿನಗಳಲ್ಲಿ ರಾಜಕೀಯದಲ್ಲಿ ಅನೇಕ ಏಳುಬೀಳುಗಳನ್ನು ಜಯಾ ಅವರು ಕಂಡರು.

೧೯೯೧ ರಿಂದ ೧೯೯೬ರ ವರೆಗೆ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವಿಕಾರ ಮಾಡಿದರು. ಈ ಸಮಯದಲ್ಲಿ ರಾಜಕೀಯವಾಗಿ ತುಂಬಾ ಗಟ್ಟಿಯಾಗಿ ಬೆಳೆದು, ತಮಿಳುನಾಡಿನ ಜನರ ಅಮ್ಮಳಾಗಿ ಗುರುತಿಸಿಕೊಂಡರು. ನಂತರ ೧೯೯೬ರಲ್ಲಿ ಜಯಲಲಿತಾ ಅವರ ಎಐಎಡಿಎಂಕೆ ಪಕ್ಷವು ಚುಣಾವಣೆಯಲ್ಲಿ ಸೋತು ಡಿಎಂಕೆ ಪಕ್ಷ ಅಧಿಕಾರಕ್ಕೆ ಬಂತು. ಆದರೆ ೧೯೯೮ರಲ್ಲಿ ಲೋಕಸಭಾ ಚುಣಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆದ್ದು ಜಯಾ ತಮ್ಮ ಸರ್ಕಾರವನ್ನು ರಚಿಸಿದರು. ಇದೇ ಸಮಯದಲ್ಲಿ ಕೇಂದ್ರ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ಹಿಂದೆ ಪಡೆದು ಸರ್ಕಾರವನ್ನು ಬೀಳಿಸಿದರು.

೨೦೦೧ರಲ್ಲಿ ಚುಣಾವಣೆಯಲ್ಲಿ ಸ್ಪರ್ದಿಸಿ ಗೆದ್ದು ೨೦೦೬ರ ವರೆಗೆ ಮುಖ್ಯಮಂತ್ರಿಯಾದರು. ನಂತರ ೨೦೦೬ರ ಚುಣಾವಣೆಯಲ್ಲಿ ಡಿಎಂಕೆ ಪಕ್ಷ ಅಧಿಕಾರಕ್ಕೆ ಬಂತು. ನಂತರ
೨೦೧೧ರ ಚುಣಾವಣೆಯಲ್ಲಿ ಮತ್ತೆ ಜಯಲಲಿತಾ ಅವರು ಗೆದ್ದು ಮತ್ತೆ ಅಧಿಕಾರವನ್ನು ಹಿಡಿದರು. ಹಲವು ರಾಜಕೀಯ ಮತ್ತು ವ್ಯಯಕ್ತಿಕ ಏಳುಬೀಳುಗಳ ನಂತರ ೨೦೧೬ರಲ್ಲಿ ನಾಲ್ಕನೇ ಬಾರಿ ಮತ್ತೆ ಮುಖ್ಯಮಂತ್ರಿಯಾದರು. ಮುಖ್ಯಮಂತ್ರಿಯಾಗಿ ನಾಲ್ಕು ತಿಂಗಳಲ್ಲಿ ಅವರ ಆರೋಗ್ಯದಲ್ಲಿ ಹಲವು ಏರುಪೇರುಗಳಾಗಿ ಆಸ್ಪತ್ರೆಗೆ ದಾಖಲಾದರು. ಡಿಸೆಂಬರ್ ೫ ರಂದು ಹೃದಯಾಘಾತದಿಂದ ವಿಧಿವಶರಾದರು.

ಜಯಲಲಿತಾರವರು ತಮಿಳುನಾಡಿನಲ್ಲಿ ಆಲ್ ಇಂಡಿಯಾ ಅಣ್ಣಾ ದ್ರಾವಿಡ್ ಮುನ್ನೇತ್ರಾ ಕಳಗಂ ಪಕ್ಷದಿಂದ ಮುಖ್ಯಮಂತ್ರಿಯಾಗಿದ್ದರು. ಮುಖ್ಯಮಂತ್ರಿಯಾಗಿದ್ದ ಅವಧಿ: ಮೊಲಬಾರಿ ೨೪ ಜೂನ್ ೧೯೯೧ ರಿಂದ ೧೨ ಮೇ ೧೯೯೬ ವರೆಗೆ, ಎರಡನೇ ಬಾರಿ ೧೪ ಮೇ ೨೦೦೧ ರಿಂದ ೨೧ ಸೆಪ್ಟೆಂಬರ್ ೨೦೦೧ ವರೆಗೆ, ಮೂರನೇ ಬಾರಿ ೨ ಮಾರ್ಚ್ ೨೦೦೨ರಿಂದ ೧೨ ಮೇ ೨೦೦೬ವರೆಗೆ. ನಾಲ್ಕನೇ ಬಾರಿ ೧೬ ಮೇ ೨೦೧೧ ರಿಂದ ೫ ಸೆಪ್ಟೆಂಬರ್ ೨೦೧೪ ವರೆಗೆ. ಐದನೇ ಬಾರಿ ೨೩ ಮೇ ೨೦೧೫ ರಿಂದ ೫ ಡಿಸೆಂಬರ್ ೨೦೧೬ವರೆಗೆ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಒಟ್ಟು ೧೪ ವರ್ಷ, ೧೨೪ ದಿನಗಳ ಸುದಿರ್ಘವಾಗಿ ಆಡಳಿತವನ್ನು ಮಾಡಿದ್ದಾರೆ.

ಜಯಲಲಿತಾ ಅವರು ಚಿತ್ರರಂಗದಲ್ಲಿ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಅವುಗಳೆಂದರೆ ಐದು ಅತ್ಯುತ್ತಮ ನಟಿ ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಿಸ್ತಿ, ಎಂಟು ಅತ್ಯುತ್ತಮ ನಟಿ ತಮಿಳುನಾಡು ಸಿನಿಮಾ ಫ್ಯಾನ್ ಪ್ರಶಸ್ತಿಗಳು, ಐದು ಅತ್ಯುತಮ ನಟಿ ಫಿಲ್ಮೇರ್ ಪ್ರಶಸ್ತಿ ತಮಿಳು, ಒಂದು ಅತ್ಯತ್ತಮ ನಟಿ ಫಿಲ್ಮೇರ್ ತೆಲಗು, ಒಂದು ರಷ್ಯಾದ ಚಲನಚಿತ್ರೋತ್ಸವ ಪ್ರಶಸ್ತಿ, ಏಳು ಮದ್ರಾಸ್ ಫಿಲ್ಮ್ ಅಸೋಸಿಯೇಷನ್ ಪ್ರಶಸ್ತಿ ಅತ್ಯುತ್ತಮ ನಟಿಗಾಗಿ ಪಡೆದುಕೊಂಡಿದ್ದಾರೆ. ೧೯೭೨ರಲ್ಲಿ ತಮಿಳುನಾಡು ಸರ್ಕಾರ ಕಲೈಮಾಮಣಿ ಪ್ರಶಸ್ತಿ ನೀಡಿತು. ೧೯೯೧ರಲ್ಲಿ ಮದ್ರಾಸ್ ವಿಶ್ವವಿದ್ಯಾನಿಲಯದಿಂದ ಅಲ್ಲದೆ ಹಲವಾರೂ ಗೌರವ ಡಾಕ್ಟರೇಟ್ ಪ್ರಶಸ್ತಿಗಳನ್ನು ಗೌರವಗಳನ್ನು ಪಡೆದಿದ್ದಾರೆ.


About The Author

Leave a Reply

You cannot copy content of this page

Scroll to Top