ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಪ್ಪನೆಂಬ ನಿಚ್ಚಣಿಕೆಯದು
ದೈರ್ಯವೆಂಬ ಬತ್ತಳಿಕೆ ನೀಡಿ
ಭದ್ರತೆಯ ಆಸರೆ ಕೊಟ್ಟು
ಬದುಕು ಹೆಣೆದ ಭರವಸೆಯದು

ಹೆಗಲಮೇಲೆ ಹೊತ್ತುಕೊಂಡು
ಜಗದ ಸಿರಿಯ ತೋರಿದಾತ
ಬಡತನದಲಿ ಸಿರಿತನ ನೀಡಿದ
ನನ್ನ ಬದುಕಿನ ನಾಯಕ

ದಿಟ್ಟ ಹೆಜ್ಜೆ ದೀರ ನುಡಿಯ
ನಿಷ್ಠುರತೆಯ ವೀರನವನು
ಕಷ್ಟನಷ್ಟ ಎಲ್ಲ ನುಂಗಿ
ಪ್ರೀತಿಪ್ರೇಮ ಹಂಚಿದ

ಹಗಲುರಾತ್ರಿ ದುಡಿದು ದುಡಿದು
ಮಕ್ಕಳಿಗಾಗಿ ಕನಸು ಹೆಣೆದು
ಕನಸು ನನಸು ಮಾಡಲು
ತನ್ನ ತಾನು ಸವೆಸಿದ

ಮೌಲ್ಯಗಳನು‌ ಬಿತ್ತುತಾ
ಸತ್ಯನಿಷ್ಠೆ ಸಾರುತಾ
ಕಾಯಕದ ಯೋಗಿ ಅಪ್ಪ
ನನ್ನ ಗುರಿಗೆ ಪ್ರೇರಕ
ಅಪ್ಪನೆಂಬ ನಿಚ್ಚಣಿಕೆ
ನನ್ನ ಬದುಕಿನ ಭರವಸೆ


.

About The Author

5 thoughts on “ಡಾ. ದಾನಮ್ಮ ಝಳಕಿ ಅವರ ಕವಿತೆ,”ಅಪ್ಪನೆಂಬ ನಿಚ್ಚಣಿಕೆ””

  1. ಅಪ್ಪ ನೆಂಬ ಆಸ್ತಿ, ಹೆಣ್ಣು ಮಗಳ ಏರಿಳಿತದ ಬದುಕಿನಲ್ಲಿ ಜೋಗುಳದಿಂದ ಶೋಭಾನೆಯವರೆಗೆ ಹಾಡಿ ಹರಿಸಿ, ಅಕ್ಷತೆ ಹಾಕಿ, ಮುತ್ತೈದೆತನಕ್ಕೆ ದೂಡುವವರಿಗೆ ತನ್ನ ಜವಾಬ್ದಾರಿ ನಿಗಿಸುತ್ತಾನಲ್ಲ! ಅದಕ್ಕಿಂತ ದೊಡ್ಡ ಆಸರೆಯ ನಿಚ್ಚಣಿಕೆ ಮತ್ಯಾರು ಇದ್ದಾರೆ?!
    – ಡಾ. ಸತೀಶ್

    1. Yes Sir, ನಿಜ ಅಪ್ಪನೆಂಬ ಆಲದಮರ ಹೆಣ್ಣುಮಕ್ಕಳಿಗೆ ಶಕ್ತಿ, ಸ್ಪೂರ್ತಿ ಹಾಗೂ ಸರ್ವಸ್ವವೇ ಆಗಿದೆ.

  2. “ಅಪ್ಪನೆಂಬ ನಿಚ್ಚನಿಕೆ ” ನಿಮ್ಮ ಕವನ ತುಂಬಾ ಚೆನ್ನಾಗಿದೆ.ಅದ್ಭುತ ಸಾಹಿತ್ಯ ಅನುಭವ ನಿಮ್ಮದು madam- ವಿಜಯಲಕ್ಷ್ಮಿ ಹಂಗರಗಿ

Leave a Reply

You cannot copy content of this page

Scroll to Top