ಕಾವ್ಯಯಾನ

ಮುಖವಾಡಗಳ ಕವಿತೆಗಳು 

These Unsettling Medical Masks Look Like Human Faces

ಸುಜಾತಾ ರವೀಶ್

ಮುಖವಾಡ ಧರಿಸಿ ಧರಿಸಿ 
ಬೇಸರವೆನಿಸಿ ತೆಗೆಯಹೋದಳು ಒಂದು ದಿನ 


ಎಳೆದರೂ ಇಲ್ಲ

ತೊಳೆದರೂ ಇಲ್ಲ 

ಚಾಕುವಿನಿಂದ ಕೆತ್ತಿದರೂ ಬರಲಿಲ್ಲ 


ಕೊನೆಗೆ ಡಾಕ್ಟರ ಬಳಿ ಹೋದಾಗ 
ತೆಗೆಯಲಾಗದು

ಜೀವಕಪಾಯ ಎಂದರು! 


ಗತ್ಯಂತರವಿಲ್ಲ ಮಾಡುವುದೇನು? 


ಸಾಯಲು ತೆಗೆದಿಡುವುದಾ 
ಬದುಕಲು ಹಾಕಿಕೊಳ್ಳುವುದಾ 


ತೆಗೆದಿಟ್ಟು  ಸತ್ತು ಬದುಕುವುದಾ
ಹಾಕಿಕೊಂಡು ಬದುಕಿ ಸಾಯುವುದಾ
ನಿರ್ಧರಿಸಲಾಗುತ್ತಿಲ್ಲ ಅವಳಿಗೀಗ


ಕಚೇರಿಯ ರಾಜಕಾರಣ 
ಕೆಲಸದ ಕಸಿವಿಸಿ
ಚಿಟ್ಟೆನಿಸುವ ತಲೆನೋವು 
ಏನೋ ಒಂದು ಬೇಯಿಸಿಟ್ಟರೆ 
“ಥೂ..ಉಪ್ಪುಮಯ ಪಲ್ಯ 
ನನ್ನ ಬೇಗ ಮೇಲೆ ಕಳಿಸಿ ಬಿಡ್ತೀಯಾ “

ಕಟ್ಟಿಕೊಂಡಾಗಿನಿಂದ ಸುರಿಸಿದ ಕಣ್ಣೀರು
ಉಪ್ಪಾಗಿ ಕ್ಷಾರವಾಗಿದೆ ಇವಳ ಸ್ವಗತ 
ಮಾತಿಗೇನು ಕಮ್ಮಿ ಇಲ್ಲ 
ಖಾರಕ್ಕೆ ಮೆಣಸಿನ ಕಾಯೇ ಬೇಕಿಲ್ಲ 
ಚುಚ್ಚಿ ನೋಯಿಸುವ ಉವಾಚ
ಒಟ್ನಲ್ಲಿ ನೆಮ್ಮದಿ ಹಾಳು ಬೇಸರ 

ಬಿಕ್ಕಿನ ಜತೆ ಹಸಿವನೂ ನುಂಗಿ ಮಲಗಿದಳು 
ಎಲ್ಲಾ ಮರೆತ ಅವನಿಗೇನೋ ಲಹರಿ 
ಕೊಂಚ ಕೊಸರಾಟ ಮಿಡುಕಾಟ ಉಸಿರಾಟ 
ಗಾದೆಯ ನಿಜ ಮಾಡಿದ ಸಾರ್ಥಕ್ಯ 
ಎದೆಗೊರಗಿದ ಅವಳಿಗೊಂತರಾ ಸಮಾಧಾನ 

ಅಲಾರಾಂ ಸದ್ದಿಗೆ ಎದ್ದಾಗ ಏನೋ ಚೈತನ್ಯ 
ಜಗವೇ ಸುಂದರವೆನಿಸಿ ಕಾಫಿ ತಂದಿತ್ತಾಗ 
“ಕಲಗಚ್ಚು! ಇಷ್ಟು ದಿನವಾದರೂ ಹದವರಿತಿಲ್ಲ” 
ಮಾತಿಗೆ ಬೆನ್ನಾಗಿ ಕಿವುಡಾದಳು ಮೂಕಳಾದಳು
ಮತ್ತೆ ಎದುರಾಡಲು ಕಸುವಿಲ್ಲ 
ಸಮಯವಂತೂ ಮೊದಲೇ ಇಲ್ಲ 

***********

One thought on “ಕಾವ್ಯಯಾನ

Leave a Reply

Back To Top