ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬೆರಳ ಹಿಡಿದು ಬೀಳದಂತೆ ತಡೆದು
ನಡೆಯುವದ ಕಲಿಸಿದ ನೀನೇ ನಡೆಯುವದ ಮರೆತು
ಮಲಗಿದರೆ ಹೇಗೆ ?

ಸೆರಗಿನ ಮುಸುಕಿನಲಿ
ಹಾಲು ಕುಡಿಯುವದ ಕಲಿಸಿ
ಬದುಕ ಕರುಣಿಸಿದ ನೀನೇ
ಬದುಕನ್ನು ತೊರೆದರೆ ಹೇಗೆ ?

ಬೆವರ ಬಸಿದು ಬಾಳದಾರಿಯಲಿ
ಬೆಳಕಾದ ನೀನೇ ಕತ್ತಲೆಯ
ಗೋರಿ ಬಯಸಿದರೆ ಹೇಗೆ ?

ಹಸಿವಿನರಿವು ಆಗುವ ಮುನ್ನ ಊಟಕ್ಕಿಟ್ಟು
ಕಷ್ಟ ಕಾಡದೇ ಸಲುಹಿದ ನೀನೇ ಕಣ್ಮರೆ ಯಾದರೆ ಹೇಗೇ ?

ನೆತ್ತಿ ಸುಡುವಾಗ ಸೂರ್ಯನಿಗೆ ಹಿಡಿ ಶಾಪ ಹಾಕಿ ಸೆರಗೊದಿಸಿ ಸೂರ್ಯನ ಶಾಖ ತಾಕದಂತೆ ಕಾಪಾಡಿದ ನೀನೇ ಬೆಂಕಿಯ ಬಯಸಿದರೆ ಹೇಗೆ ?

ಸಮಯ ವಾಯಿತು ಎಳು
ಹಸಿವಾಗಿದೆ ಉಣಬಡಿಸು.

ಕಣ್ಣಲುಗುತ್ತಿಲ್ಲ
ಉಸಿರ ತಿತ್ತಿಗಳ ಎರಿಳಿತವಿಲ್ಲ
ಹೃದಯ ಮಿಡಿಯುತ್ತಿಲ್ಲ
ನನಗಿನ್ನು ಯಾರಿಲ್ಲ !!!

ದೇವರಾಗ ಬಲ್ಲೆ ನೀನು
ದೇವರು ನಿನಾಗಲಾರ
ಕರುಣೆ ಇಲ್ಲವೇ ಕಾಳ ನಿನಗೆ ?

ಕತ್ತರಿಸಿ ಬಿಟ್ಟೆಯಾ
ಹೆತ್ತ ಕರುಳ ?
ಧಿಕ್ಕಾರ ವಿರಲಿ ನಿನಗೆ


About The Author

Leave a Reply

You cannot copy content of this page

Scroll to Top