ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಭಾರತದ ಎರಡನೇ ಮಹಿಳಾ ಮುಖ್ಯಮಂತ್ರಿ ನಂದಿನಿ ಸತ್ಪತಿ
(ಆಡಳಿತಾವಧಿ: ೧೪/೦೬/೧೯೭೨ ರಿಂದ ೧೬/೧೨/೧೯೭೬, (೪ವರ್ಷ ೧೮೫ದಿನಗಳು))
ನಂದಿನಿಯವರು ಭಾರತ ದೇಶದ ಎರಡನೇ ಮಹಿಳಾ ಮುಖ್ಯಮಂತ್ರಿ. ಇವರು ರಾಜಕಾರಣಿ ಜೊತೆಗೆ ಸಾಹಿತಿಯು ಕೂಡ ಆಗಿದ್ದರು. ಇವರು ೯ ಜೂನ ೧೯೩೧ರಂದು ಕರಾವಳಿಯ ಪುರಿಯ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ಕಾಳಿಂದಿ ಚರಣ್ ಪಾಣಿಗ್ರಾಹಿ. ತಾಯಿ ರತ್ನಮಣಿ ಪಾಣಿಗ್ರಾಹಿ. ಇವರು ಬಾಲ್ಯ ಕಟಕನ್ ಪಿತಾಪುರದಲ್ಲಿ ಕಳೆದರು. ಇವರ ಕುಟುಂಬ ರಾಜಕೀಯ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದೆ.
ನಂದಿನಿಯವರು ಭಾರತದ ಸ್ವತಂತ್ರ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಇವರು ತಮ್ಮ ೮ನೇ ವಯಸ್ಸಿನಲ್ಲಿ ಬ್ರಿಟಿಷರ ವಿರುದ್ಧ ಬರೆದಿದ್ದ ಪೋಸ್ಟರಗಳನ್ನು ಗೋಡೆಗಳ ಮೇಲೆ ಅಂಟಿಸಿದ್ದರು. ಮತ್ತು ಯೂನಿಯನ್ ಜ್ಯಾಕ್ ಅನ್ನು ಕೆಳಕ್ಕೆ ಎಳೆದಿದ್ದರು. ಹಾಗಾಗಿ ಇವರನ್ನು ಬ್ರಿಟಿಷ ಪೊಲೀಸರು ನಿರ್ಧಯವಾಗಿ ಹೊಡೆದರು. ಈ ವಿಷಯವು ದೇಶದಲ್ಲಿ ವ್ಯಾಪಕವಾಗಿ ಚರ್ಚೆಯಾಯಿತು. ಸ್ವತಂತ್ರ ಹೋರಾಟ ಚಳುವಳಿಯಲ್ಲಿ ತೊಡಗಿದವರಿಗೆ ಮತ್ತಷ್ಟು ಸಿಟ್ಟುಬರುವಂತೆ ಮಾಡಿತು. ನಂದಿತಾರವರು ತಾವು ಓಡಿಯಾದಲ್ಲಿ ರಾವೆನ್‌ಶಾ ಕಾಲೇಜಿನಲ್ಲಿ ಮಾಸ್ಟರ್ ಆಫ್ ಆರ್ಟ್ಸ್ ಓದುತ್ತಿದ್ದಾಗ, ಕಮ್ಯುನಿಷ್ಟ ಪಕ್ಷದ ವಿದ್ಯಾರ್ಥಿ ವಿಭಾಗದ ಸ್ಟೂಡೆಂಟ್ ಫೆಡರೇಶನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
೧೯೫೧ರಲ್ಲಿ ಕಾಲೇಜು ಶಿಕ್ಷಣಕ್ಕೆ ಹೆಚ್ಚಿನ ವೆಚ್ಚಗಳನ್ನು ಭರಿಸುವುದನ್ನು ವಿರೋಧಿಸಿ ಪ್ರತಿಭಟನೆ ಮಾಡಿದರು. ಈ ಪ್ರತಿಭಟನೆಯ ನಂತರದ ದಿನಗಳಲ್ಲಿ ರಾಷ್ಟಿçÃಯ ಯುವ ಚಳುವಳಿಯಾಗಿ ಬದಲಾಯಿತು ಮತ್ತು ಈ ಚಳುವಳಿಯಲ್ಲಿ ತೊಡಗಿದಾಗ ಪೊಲೀಸರು ಬಂಧಿಸಿ ಜೈಲಿಗೆ ಸೇರಿಸಿದರು. ಇವರೊಂದಿಗೆ ಹಲವು ಜನರನ್ನು ಕೂಡ ಬಂಧಿಸಿದರು. ಇವರಲ್ಲಿ ದೇವೆಂದ್ರ ಸತ್ಪತಿಯವರು ಕೂಡ ಒಬ್ಬರು. ಇವರನ್ನು ಜೈಲಿನಲ್ಲಿ ನಂದಿನಿಯವರು ಬೇಟಿಯಾದರು. ನಂತರದ ದಿನಗಳಲ್ಲಿ ಇವರನ್ನೆ ಮದುವೆಯಾದರು.

೧೯೬೨ರಲ್ಲಿ ಓರಿಸ್ಸಾದಲ್ಲಿ ಕಾಂಗ್ರೆಸ್ ಪಕ್ಷವು ಪ್ರಬಲವಾಗಿತ್ತು. ೧೪೦ ಜನ ಸದಸ್ಯರನ್ನು ಹೊಂದಿರುವ ವಿಧಾನ ಸಭೆಯಲ್ಲಿ ಕಾಂಗ್ರೆಸ ಪಕ್ಷವು ೮೦ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿತು. ಆಗ ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಸದಸ್ಯರ ಪ್ರತಿನಿದಿತ್ವ ಇರಬೇಕೆಂದು ಚಳುವಳಿ ಪ್ರಾರಂಭವಾಯಿತು. ಆಗ ಅಸೆಂಬ್ಲಿಯು ನಂದಿನಿಯವರನ್ನು ಭಾರತದ ಸಂಸತ್ತಿನಲ್ಲಿ ಮೇಲ್ಮನೆಗೆ ಆಯ್ಕೆ ಮಾಡಿದರು. ಸಂಸತ್ತಿನಲ್ಲಿ ಎರಡು ಅವಧಿಗೆ ತಮ್ಮ ಸೇವೆಯನ್ನು ಸಲ್ಲಿಸಿದರು. ೧೯೬೬ರಲ್ಲಿ ಇಂದಿರಾಗಾಂಧಿಯವರು ಭಾರತದ ಪ್ರಧಾನಿಯಾಗಿದ್ದಾಗ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಮಂತ್ರಿಯಾದರು. ಅನಂತರ ೧೯೭೫ರಲ್ಲಿ ನಂದಿನಿಯವರು ಓರಿಸ್ಸಾದ ಮುಖ್ಯ ಮಂತ್ರಿಯಾದರು. ಇವರ ಆಡಳಿತಾವಧಿಯಲ್ಲಿ ಇಂದಿರಾಗಾಂಧಿ ಸರಕಾರವು ತುರ್ತು ಪರಿಸ್ಥಿತಿಯನ್ನು ಹೇರಿತು. ಇದನ್ನು ನಂದಿನಿಯವರು ವಿರೋಧಿಸಿದರು. ೧೯೭೬ರಲ್ಲಿ ತಮ್ಮ ಅಧಿಕಾರವನ್ನು ತೊರೆದರು. ೧೯೭೭ರಲ್ಲಿ ಸಾರ್ವತ್ರಿಕ ಚುಣಾವಣೆಯ ಸಮಯದಲ್ಲಿ ನಂದಿನಿಯವರು ಜಗಜೀವನ್ ರಾಮ್ ನೇತೃತ್ವದ ಪ್ರತಿಭಟನಾಕಾರರ ಗುಂಪಿನ ಭಾಗವಾಗಿದರು. ನಂತರದ ದಿನಗಳಲ್ಲಿ ಕಾಂಗ್ರಸ್ ಫಾರ್ ಡೆಮಾಕ್ರಸಿ (ಸಿಎಫ್‌ಡಿ)ಪಕ್ಷವಾಯಿತು. ನಂತರ ೧೯೭೭ ರಲ್ಲಿ ಈ ಪಕ್ಷವು ಜನತಾ ಪಕ್ಷದೊಂದಿಗೆ ವಿಲೀನಗೊಂಡಿತು. ನಂತರ ನಂದಿನಿಯವರು ಧೆಂಕನಲ್‌ನಿಂದ ಓರಿಸ್ಸಾ ವಿಧಾನ ಸಭೆಗೆ ಆಯ್ಕೆಯಾದರು. ೧೯೮೦ರಲ್ಲಿ ಕಾಂಗ್ರಸ್‌ನಿಂದ ವಿಧಾನ ಸಭೆಗೆ ಮತ್ತೊಮ್ಮ ಆಯ್ಕೆಯಾದರು. ಮತ್ತೆ ರಾಜೀವ್ ಗಾಂಧಿಯವರ ಕೋರಿಕೆಯ ಮೇರೆಗೆ ೧೯೮೯ರಲ್ಲಿ ನಂದಿನಿಯವರು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡರು.

ನಂದಿನಿಯವರು ರಾಜಕೀಯದಲ್ಲಿ ಅಷ್ಟೆ ಅಲ್ಲದೇ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಒಡಿಯಾ ಭಾಷೆಯಲ್ಲಿ ಬರೆಯುವದರೊಂದಿಗೆ ಭಾಷಾಂತರ ಕೂಡ ಮಾಡುತ್ತಿದ್ದರು. ಇವರ ಸಾಹಿತ್ಯಿಕ ಕೊಡುಗೆಗಾಗಿ ೧೯೯೮ರಲ್ಲಿ ‘ಸಾಹಿತ್ಯ ಭಾರತಿ ಸಮ್ಮಾನ್’ ಪ್ರಶಸ್ತಿಯನ್ನು ಪಡೆದರು. ಇವರು ತಸ್ಲಿಮಾ ನಸ್ರೀನ್ ಅವರ ‘ಲಜ್ಜಾ’ ವನ್ನು ಓರಿಯಾ ಭಾಷೆಗೆ ಅನುವಾದಿಸಿದ್ದಾರೆ. ಇವರು ತಮ್ಮ ಜೀವಿತಾ ಅವಧಿಯಲ್ಲಿ ಸಕ್ರಿಯವಾಗಿ ಎಲ್ಲಾ ರಂಗದಲ್ಲಿ ಕಾರ್ಯನಿರ್ವಹಿಸಿದರು.
ನಂದಿನಿಯವರು ೪ನೇ ಅಗಸ್ಟ್ ೨೦೦೬ರಂದು ಭುವನೇಶ್ವರದಲ್ಲಿರುವ ತಮ್ಮ ಮನೆಯಲ್ಲಿ ನಿಧನರಾದರು. ಇವರ ಜನ್ಮ ದಿನವನ್ನು ಜೂನ ೯ ರಂದು ‘ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ – ನಂದಿನಿ ದಿವಸ್’ ಎಂದು ಘೋಷಿಸಿತು.  ಟ್ರಸ್ಟ್’ ಸಾಮಾಜಿಕ ಸಂಸ್ಥೆಯನ್ನು ಸ್ಥಾಪಿಸಲಾಗಿದೆ.


About The Author

Leave a Reply

You cannot copy content of this page

Scroll to Top