ಪ್ರಭಾವತಿ ಎಸ್ ದೇಸಾಯಿ ಅವರ ಗಜಲ್


ಮೇಘವು ಸಂದೇಶ ತಂದಿದೆ ಅವನು ಬರುವನೆಂದು
ಮಳೆ ಬಿಲ್ಲು ಕಮಾನ ಕಟ್ಟಿದೆ ಅವನು ಬರುವನೆಂದು

ನಯನದಿ ನಕ್ಷತ್ರ ಹೊಳೆಯುತಿದೆ ಅವನು ಬರುವನೆಂದು
ಮೂಡಣದ ಮುಗಿಲು ರಂಗೇರಿದೆ ಅವನು ಬರುವನೆಂದು

ಹಿತ್ತಲ ಲತೆ ಚಿಗುರಿ ಹಸಿರಾಗಿದೆ ಅವನು ಬರುವನೆಂದು
ಮುಡಿದ ಮಲ್ಲೆ ಮಾಲೆ ಬಿರಿದಿದೆ ಅವನು ಬರುವನೆಂದು

ಚಂದಿರ ಮುನಿದು ಮರೆಯಾಗಿದೆ ಅವನು ಬರುವನೆಂದು
ನೈದಿಲೆಯು ಅರಳಿ ನಗುತಿದೆ ಅವನು ಬರುವನೆಂದು

ಗುಲ್ ಮೋಹರ ಹಡದಿ ಹಾಸಿದೆ ಅವನು ಬರುವನೆಂದು
ಗಿರಿ ನವಿಲು ಗರಿ ಬಿಚ್ಚಿ ಕುಣಿಯುತಿದೆ ಅವನು ಬರುವನೆಂದು

ದುಂಬಿ ತಾವರೆ ಚುಂಬಿಸುತಿದೆ ಅವನು ಬರುವನೆಂದು
ಬನದ ಕೋಗಿಲೆ ಹಿಗ್ಗಿ ಹಾಡುತಿದೆ ಅವನು ಬರುವನೆಂದು

ಮೋಹದ ಜೇಡ ಬಲೆ ಹೆಣೆದಿದೆ ಅವನು ಬರುವನೆಂದು
ಧ್ಯಾನ ತಮ ಸರಿಸಿ”ಪ್ರಭೆ” ಹರಡುತಿದೆ ಅವನು ಬರುವನೆಂದು


One thought on “ಪ್ರಭಾವತಿ ಎಸ್ ದೇಸಾಯಿ ಅವರ ಗಜಲ್”

  1. ಸುಂದರ ಭಾವದ ಗಜಲ್ ಮೇಡಂ ಧನ್ಯವಾದಗಳು

Leave a Reply