ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
“ನಾವು ಸಾಗುವ ದಾರಿ”

ನಿನ್ನೆಯದೆಲ್ಲವ ಮರೆತು
ಬರುವ ನಾಳೆಗೆ ನೀನು
ನಕ್ಕು ಹಿಡಿದು ಬಿಡು ನನ್ನ ಕೈ ಇಂದು
ಸತ್ತವರು ಸೋತಿಲ್ಲ
ಬದುಕು ಮೊಟಕಾಗಿಲ್ಲ
ಮತ್ತೆ ಉಸಿರಿಸಬೇಕು ಸತ್ಯ ನುಡಿಯು
ಒಲವ ತವರಿನ ಗೆಲುವು
ಸಂತೃಪಿ ಸಿರಿಗರಿಯ
ಬದುಕುವುದೇ ನೈಜ ಚೆಲುವು
ಕಡಲ ಪ್ರೀತಿಯ ತಂದು
ಒಡಲ ತುಂಬುವ ಸ್ನೇಹ
ಜಡ ಮರೆತು ಜಂಗಮಕೆ ಹೆಜ್ಜೆ ಹಾಕು
ತಿರುಗುವ ಭೂಮಿಯಲಿ
ಬಸವಳಿದ ಜೀವನವು
ಕೂಡಿ ಸಾಗುವ ನಾನು ನೀನು
ಜೀವ ನೆಲೆ ಸೆಲೆಯು
ಮಹಾ ಕಾವ್ಯ ಸಂಪುಟವು
ಓದುತ್ತಾ ನಡೆಯುವುದು ನಮ್ಮ ಧರ್ಮ
ಕಳೆದದ್ದು.ನೆನೆಯುತ್ತಾ
ನಿತ್ಯ ಅಳುವುದು ಬಿಟ್ಟು
ನಿನ್ನರಸಿ ಬರುವುದನು ಅಪ್ಪಿಕೋ
ಅತ್ತು ಬಿಡು ದುಃಖ ತೊಲಗಲಿ
ನಗೆ ಮಲ್ಲಿಗೆ ಅರಳಿ ನಿಲ್ಲಲಿ
ನಾವು ಸಾಗುವ ದಾರಿ ಹಲವು ವರುಷ
ಡಾ ಶಶಿಕಾಂತ ಪಟ್ಟಣ ರಾಮದುರ್ಗ





ಅತ್ಯಂತ ಮನೋಜ್ಞ ಸುಂದರ ಕವಿತೆ ಸರ್
ಸುಂದರ ಕವನ ಮತ್ತು ಅಭಿವ್ಯಕ್ತಿ
ದೀಪಾ ಪೂಜಾರಿ
Excellent poem
ಅತ್ಯುತ್ತಮ ಕವನ ಸರ್
ನಾವು ಸಾಗುವ ದಾರಿಯ ತಿಳುವಳಿಕೆಯ ಹೂರಣ ಎಲ್ಲರ ಮನ ಮುಟ್ಟುವಂತಿದೆ
ಸುತೇಜ
ಅತ್ಯುತ್ತಮ ಕವನ ಸರ್
“ನಾವು ಸಾಗುವ ದಾರಿ ” ಕವನ ದಲ್ಲಿ ಹಿಂದಿನದನ್ನು ಮರೆತು ಮುಂದೆ ಸಾಗುವಾದರತ್ತ ಗಮನ ಕೊಡಬೇಕು ಎನ್ನುವದು ತುಂಬಾ ಸೊಗಸಾಗಿ ಮೂಡಿ ಬಂದಿದೆ.
ಜೀವನ ಕಷ್ಟ ಮತ್ತು ಸುಖಗಳ ಸಮ್ಮಿಲನ
‘ನನ ಕೈಯ ಹಿಡಿದಾಕೆ ಅಳು ನುಂಗಿ ನಗು ಒಮ್ಮೆ
ನಾನೂನು ನಕ್ಕೇನ’ ಬೇಂದ್ರೆ ನೆನಪಾದರು.
ಆದರೆ ಅದು ಅಷ್ಟು ಸರಳವೇ ?
ಆಶಾವಾದಿತ್ದದ ಕವನ ಚೆನ್ನಾಗಿದೆ. ಆದರೆ ಭಾವುಕ ಮನಸ್ಸಿಗೆ ಅನುಸರಿಸಲು ಕಷ್ಟವಾಗುತ್ತದೆ.
ಸುಂದರ ಭಾವದ ಕವಿತೆ
ತುಂಬಾ ಭಾವನೆ ತುಂಬಿದ ಕವನ.
ಬದುಕಲ್ಲಿ ಕಷ್ಟ, ನೋವು, ದುಃಖ ಸಹಜ… ಮರೆತು ನಗುತ ಮುಂದೆ ಸಾಗುವುದು ಒಳಿತು ಎನ್ನುವ ಭಾವ ತುಂಬಿದ ಕವನ ಅರ್ಥಪೂರ್ಣವಾಗಿದೆ ಸರ್
ಜಯಶ್ರೀ ಎಸ್ ಪಾಟೀಲ
ಸೊಗಸಾಗಿದೆ sir
ಅರ್ಥಪೂರ್ಣ ಕವನ ಸರ್.