ಮುತ್ತು ಬಳ್ಳಾ ಕಮತಪುರ ಗಜಲ್



ಮನೆ ಒಳಗೂ ಹೊರಗೂ ಜಾತಿನಾಯಿ
ಮನೆ ಬಂದರೂ ಬಿಡುತ್ತಿಲ್ಲ ಊರುನಾಯಿ

ರಾತ್ರಿ ಹಗಲು ಒಂದೇ ಕಾಲಮಿತಿ ಅಲ್ಲಿ
ಇನ್ನೂ ಕೆಲವರಿಗೆ ಕಿವುಡು ಬೀದಿನಾಯಿ

ನೋಡಿಯು ನೋಡಂಗ ಕಲಿಸಿದ ನಾಯಿ
ತಿಳಿಯದಂಗ ಬಾಜುಮನಿ ಮಂದಿನಾಯಿ

ವಜ್ಜಾಗೈತಿ ನಿಯತ್ತ ಇಲ್ಲದ ಈ ಬದುಕು
ಊರ ಬಿಟ್ಟರು ಬಿಡದ ಬಿಡಾಡಿನಾಯಿ

ಮುತ್ತು ಜನರ ಪಾಲಿಗೆ ಇನ್ನಿಲ್ಲದ ಲಯ
ವರ್ಗ ತಳಹದಿ ಹರಡುವ ಹುಚ್ಚನಾಯಿ


Leave a Reply