ಜಂಧ್ಯಾಲ ರಘುಬಾಬು ಅವರ ತೆಲಗು ಕವಿತೆ “ಆರಿಸಿಕೊಳ್ಳುತ್ತಲೇ ಇದ್ದೇನೆ” ಕನ್ನಡಾನುವಾದ ಕೊಡೀಹಳ್ಳಿ ಮುರಳೀಮೋಹನ್

ಬೇರೆಯಾಗುವವರ ನಡುವೆ
ಒಟ್ಟಾಗಿರುವವರನ್ನು
ಪ್ರೀತಿಯಿಂದ ಆರಿಸಿಕೊಳ್ಳುತ್ತಲೇ ಇದ್ದೇನೆ.

ಕಠಿಣ ಮಾತುಗಳ ನಡುವೆ
ಮೃದುವಾದ ಪದಗಳಿಗಾಗಿ
ಕಷ್ಟವಾದರೂ ಹುಡುಕುತ್ತಲೇ ಇದ್ದೇನೆ.

ಜೀವನವೆಂಬ ಕನ್ನಡಿಯಲಿ
ಒಳ್ಳೆಯ ದೃಶ್ಯಗಳಿಗಾಗಿ
ಕಾಯುತ್ತಲೇ ಇದ್ದೇನೆ.

ಕುಸಿಯುತ್ತಿರುವ ಮೌಲ್ಯಗಳ ನಡುವೆ
ಏರುತ್ತಿರುವ ಒಳ್ಳೆಯತನಕ್ಕೆ
ಆಸರೆಯಾಗಿ ಬೆಂಬಲಿಸುತ್ತಿದ್ದೇನೆ.

ಎರಡು ಕಾಲುಗಳ ಮೇಲೆ
ನಡೆಯುತ್ತಿರುವ ಜೀವಗಳಲ್ಲಿ
ನಿಜವಾದ ಮನುಷ್ಯರನ್ನು ಜರಡಿ ಹಿಡಿಯುತ್ತಿದ್ದೇನೆ.

ಕಲ್ಲುಗಳ ರಾಶಿಯಲಿ
ಸುಂದರವಾದ, ನುಣುಪಾದ ಕಲ್ಲುಗಳಿಗಾಗಿ
ನಿರಂತರ ಬೇಟೆಯಾಡುತ್ತಿದ್ದೇನೆ.

ಜೀವನವೆಂಬ ಪಯಣದಲ್ಲಿ
ವೇಗವಾಗಿ ಸಾಗುತ್ತಿರುವ ದಿನಗಳಲ್ಲಿ
ಇಷ್ಟವಾದ ಸಂಗತಿಗಳನ್ನು ಸಂಗ್ರಹಿಸುತ್ತಲೇ ಇದ್ದೇನೆ.


Leave a Reply