ಗಜಲ್ ಸಂಗಾತಿ
ಶ್ರೀಪಾದಆಲಗೂಡಕರ
ಗಜಲ್
ಅಭಿಯಂತರ ದಿನಕ್ಕೆ

ಬಿತ್ತಿರುವ ಬೀಜಗಳಿಗೆ ಹೊಸ ರೂಪ ನೀಡುವನು ಇಂಜಿನಿಯರ್
ಕೆತ್ತಿರುವ ಕಲ್ಲುಗಳಲಿ ನವಚೇತನ ತುಂಬಿ ಮೂಡುವನು ಇಂಜಿನಿಯರ್
ಯಂತ್ರ ಶಿಲ್ಪಿಯಾಗದೆ ವಾಸಿಸಲು ಗೂಡು ಕಟ್ಟುವನು ಇವನಲ್ಲವೇ
ಸ್ವತಂತ್ರ ಭಾರತದ ಏಳಿಗೆಗಾಗಿ ಶ್ರಮವನು ಮಾಡುವನು ಇಂಜಿನಿಯರ್
ಸಮಸ್ಯೆ ಎದುರಿಸುತ ಪರಿಹಾರದ ಪರಿಕಲ್ಪನೆ ಸೂಚಿಸುವ ಶಿಲ್ಪಿಯಿವನು
ತಾಮಸ ಇದ್ದರೂ ಶಾಂತತೆಯ ನಿರ್ಣಯ ಕೊಡುವನು ಇಂಜಿನಿಯರ್
ಸೃಷ್ಟಿಯಲಿ ಕೌತುಕದ ಯಾಂತ್ರಿಕ ಬದಲಾವಣೆಯ ಜೀವನ ಬದಲಿಸುವನು
ಕೃಷಿಯಲಿ ಸಾಧನಗಳ ನಿರ್ಮಿಸಿ ಬದುಕನು ತೀಡುವನು ಇಂಜಿನಿಯರ್
ಸಂಪರ್ಕ ವಾಹಿನಿಗಳ ಸಂವಹನ ಮಾಡುತ ವಿಶ್ವವನು ಕೂಡಿಸುವನು
ಸಮರ್ಪಕ ಸಮಯದಲಿ ಮಾಹಿತಿಯ ರವಾನಿಸಿ ಬಿಡುವನು ಇಂಜಿನಿಯರ್
ವಿದ್ಯುತ್ ಅನುಶಕ್ತಿಯ ಕಿರಣಗಳ ಮನೆಗಳಿಗೆ ಮನಗಳಿಗೆ ಬೆಳಕಾಗುವನು
ಅದ್ಬುತ ಜಾಲತಾಣ ಮೂಡಿಸಿ ಬ್ರಹ್ಮಾಂಡ ತೋರಿಸಿ ಪಾಡುವನು ಇಂಜಿನಿಯರ್
ಸ್ಮರಿಸುವ ಜಗದ ಬೆಳಕಾಗಿರುವ ವಿಶ್ವೇಶ್ವರಯ್ಯರ ಮಾರ್ಗವನು ಶ್ರೀಪಾದ
ಹಾರಿಸುತ ಅಭಿಯಂತರ ಸೃಜನತೆಯ ಬಾವುಟ ಹೂಡುವನು ಇಂಜಿನಿಯರ್
ಶ್ರೀಪಾದ ಆಲಗೂಡಕರ




