ಕಾವ್ಯ ಸಂಗಾತಿ
ಎಮ್ಮಾರ್ಕೆ
ಗಜಲ್

ಇಲ್ಲಿ ಪ್ರೀತಿಗೂ ಜಾತಿಯ ಲೇಪಿಸುತ್ತಾರೆ ಕೆಂಪಿ
ಪರಿಶುದ್ಧವಾಗಿಹ ಪ್ರೀತಿಯ ಶಪಿಸುತ್ತಾರೆ ಕೆಂಪಿ
ಅಂತಸ್ತುಗಳ ಅಡ್ಡ ತಂದು ಖೆಡ್ಡಾ ತೋಡಿದ್ದಾರೆ
ಅಂದಿನ ರಿವಾಜು ರೀತಿಯ ಪಾಲಿಸುತ್ತಾರೆ ಕೆಂಪಿ
ಪ್ರೇಮ-ಕಾಮವೆರಡು ಒಂದೇ ತಟ್ಟೆಯ ತಿನಿಸು
ಬೇಧವ ಗೈದು ನೀತಿಯ ಭೋಧಿಸುತ್ತಾರೆ ಕೆಂಪಿ
ಕಡೆಯತನಕ ಹಿಡಿಯಬೇಕೆಂದ ಕೈಗಳೀಗ ಖಾಲಿ
ಭಾವಗಳ ಸುತ್ತ ಬೇಲಿಯ ಹಾಕಿಸುತ್ತಾರೆ ಕೆಂಪಿ
ಕುಂಬಾರನ ಬಗ್ಗೆ ಕಿವಿ ಚುಚ್ಚುವದೀಗ ಸಹಜವೇ
ಇಂದಿನ ಆಸೆಗೆ ನಾಳೆಯ ಸಾಯಿಸುತ್ತಾರೆ ಕೆಂಪಿ
ಎಮ್ಮಾರ್ಕೆ




