ರಾಶೇ..ಬೆಂಗಳೂರು ಅವರ ಎರಡು ಕವಿತೆಗಳು

ಸರಿದುಹೋದ ಕಾಲ
ಚಕ್ರದಾಗೆ ಉರುಳಿಹೋಯ್ತು
ಅನುಭವದ ಮೂರ್ಕಾಲ
ಬದುಕಿನ ಬವಣೆಯಾಯ್ತು

ವಿಚಿತ್ರವಾದ ಆ ನಗು
ಒಲವಿನಲೆಗಳ ದಾಟಿ
ಸಿಹಿ ಕಹಿಗಳ ಮಿನುಗು
ಜೀವತಂತಿಯ ರಾಗ ಮೀಟಿ

ಮಧುರ ಮಿಲನಗಳ
ಭಾವ ಸಂಗಮದ ಬೆಸುಗೆ
ಸೃಷ್ಟಿ ನಿಯಮಾವಳಿಗಳ
ಪಿಸು ನುಡಿಗಳ ಹೊತ್ತಿಗೆ

ಭವ್ಯ ಬದುಕಿನ ಚಿತ್ರಣ
ದಿನನಿತ್ಯಗಳ ಚಂಚಲತೆ
ತಾಕಲಾಟಗಳದೇ ತಲ್ಲಣ
ಬೋರಿಟ್ಟ ನೋವು ವ್ಯಾಕುಲತೆ

ಮೋಡಿ

ಮುಂಗುರುಳು
ಜೋತು
ತೂಗಾಡುತಿದೆ..
ನನ್ನೆದೆಯ ಬಡಿತ
ಹೆಚ್ಚಾಗುತಿದೆ..
ಆ ಮುಂಗುರಳ
ಮೋಡಿಯಲಿ ನಾ
ಜಾರುತಿಹೆನು..
ಮುಂಗುರುಳ
ಬದಿಗೊತ್ತಿ
ಬದುಕಿಸೆನ್ನ ಬಡ
ಜೀವವನು..

————————–

Leave a Reply