ಜೀವನ ಸಂಗಾತಿ
ಗಾಯತ್ರಿ ಸುಂಕದ
“ಸಾವು ಎಲ್ಲದಕ್ಕು ಪರಿಹಾರವಲ್ಲ”
ವಿಶ್ವ ಆತ್ಮಹತ್ಯೆತಡೆದಿನದ ವಿಶೇಷ-

ನಾವು ಎತ್ತ ಕಡೆಗೆ ಸಾಗುತ್ತಿದ್ದೇವೆ?
ಹಲೋ
ಹೇಗಿದ್ದೀರಾ??
ಜೀವನ ಎನ್ನುವುದು ನಮಗೆ ದೇವರು ಕೊಟ್ಟ ವರ. ಯಾರಿಗೆ. ಪುನರ್ಜನ್ಮದಲ್ಲಿ ನಂಬಿಕೆ ಇರುವುದಿಲ್ಲವೋ ಅವರಿಗಂತೂ ಒಂದು ಸುವರ್ಣ ಅವಕಾಶ ಇದ್ದ ಹಾಗೆ.ಜೀವನದ ಮಹತ್ವವನ್ನು ತೋರಿಸಲೆಂದೇ ಪ್ರತಿ ವರ್ಷ ಸೆಪ್ಟೆಂಬರ್ 10ನೇ ತಾರೀಖು ನಾವು “”ವಿಶ್ವ ಆತ್ಮಹತ್ಯೆ ತಡೆ ದಿನ””ಎಂದು ಆಚರಿಸಲಾಗುತ್ತಿದೆ.
ಆತ್ಮಹತ್ಯೆ ಭಾವ. ಮುಖ್ಯವಾಗಿ ನಮ್ಮನ್ನು ಆವರಿಸಿ ಕೊಳ್ಳುವುದು ನಮ್ಮಲ್ಲಿ ಮಾನಸಿಕ ಖಿನ್ನತೆ ನಮ್ಮಲ್ಲಿ ಒಡ. ಮೂಡಿದ್ದಾಗ.ಬದುಕಿನಲ್ಲಿ ಅತಿಯಾದ. ಖಿನ್ನತೆ ಬರುವುದು ನಾವು ನಿರಾಶೆ ಅನುಭವಿಸಿದಾಗ.ನಿರಾಶೆ ಭಾವ ಬರಲು ಕಾರಣಗಳು ಬೇಕಿಲ್ಲ.
ಮೊಬೈಲ್ ಕೊಟ್ಟಿಲ್ಲ ಎಂಬ ಕಾರಣಕ್ಕೆ ಆತ್ಮ ಹತ್ಯೆ ಮಾಡಿಕೊಂಡ ಬಾಲಕನ ಬಗ್ಗೆ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು.ಕಬ್ಬಿಗೆ ಸರಿಯಾದ ಬೆಲೆ ಸಿಗಲಿಲ್ಲ ಎಂದು ಕಬ್ಬಿನ ತೋಟಕ್ಕೆ ಬೆಂಕಿ ಹಚ್ಚಿ ಅದರಲ್ಲಿ ಜಗಿದು ಆತ್ಮ ಹತ್ಯೆ ಮಾಡಿದ ರೈತನ ಕಥೆ ಓದಿದಾಗ ಕಣ್ಣಲ್ಲಿ ನೀರು ಜಿನುಗಿತು.ಮದುವೆಗೆ ಹೆಣ್ಣು ಸಿಗಲಿಲ್ಲ ಎಂದು ಆತ್ಮ ಹತ್ಮೆ ಮಾಡಿಕೊಂಡ ಯುವಕನ ಕಥೆ, ಸೊಸೆ ಸರಿಯಾಗಿ ಅಡಿಗೆ ಮಾಡಲಿಲ್ಲ ಎಂದು ಆತ್ಮ ಹತ್ಯೆ ಮಾಡಿಕೊಂಡ ವೃದ್ಧ ದಂಪತಿಗಳ ಕಥೆ ಕೇಳಿದಾಗ ಅಳಬೇಕೋ, ನಗಬೇಕೋ ಗೊತ್ತಾಗಲಿಲ್ಲ.
ನಮ್ಮಲ್ಲಿ. ಅಸುರಕ್ಷಿತ ಭಾವನೆ ಮೂಡಿದಾಗ ನಮ್ಮಷ್ಟಕ್ಕೆ ನಮಗೆ ಬದುಕಿದ್ದು ವೇಸ್ಟ್ ಅನಿಸಿದಾಗ ಮನಸ್ಸು ಸಮಸ್ಯೆಯಿಂದ ಪಾರಾಗಲು ಆತ್ಮಹತ್ಯೆಯನ್ನು ಪ್ರಚೋದಿಸುತ್ತದೆ.ಈಸಬೇಕು ಇದ್ದು ಜಯಿಸಬೇಕು ಎನ್ನುವ ದಾಸರ ಹಾಡನ್ನು ಕೇಳಿದಾಗ ಆತ್ಮ ಹತ್ಯೆ ಎಷ್ಟು ಬಾಲಿಶ ಎನಿಸುತ್ತದೆ.ಪ್ರತಿಯೊಬ್ಬರಲ್ಲೂ ಉತ್ತಮ ಅಂಶಗಳು ಇದ್ದೇ ಇರುತ್ತದೆ.ಆದರೆ ಸಮಸ್ಯೆ ದೊಡ್ಡದಾದರೆ ಜೀವನ ಚಿಕ್ಕದು ಆಗಿ ಬಿಡುತ್ತದೆ. ಎಲ್ಲವೂ ನಮ್ಮ point of view ಅಷ್ಟೆ.
ನಮ್ಮ ಜೀವನದಲ್ಲಿ ಸಮಸ್ಯೆಗಳೆಂದರೆ ಗ್ರಹಣ ಇದ್ದ ಹಾಗೆ. ಹೇಗೆ. ಗ್ರಹಣಗಳಿಗೆ ಮೋಕ್ಷ ಇರುತ್ತದೆಯೋ. ಹಾಗೆಯೇ ನಮ್ಮ ಕಷ್ಟಗಳಿಗೆ ಮೋಕ್ಷ ಇದ್ದೇ ಇದೆ. ಆದರೆ ಕಾಯುವ ತಾಳ್ಮೆ ನಮ್ಮಲ್ಲಿ ಇರಬೇಕು.ನಮ್ಮಲ್ಲಿ ಒಂದು ಜೋಕ್ ಹೇಳುತ್ತಾರೆ. ನೀನು ಇವತ್ತು ಸತ್ತರೆ ಮತ್ತೆ ಹುಟ್ಟಿ LKG ಗೆ ಅಡ್ಮಿಷನ್ ತಗೋಬೇಕು ಮತ್ತೆ ಓದಬೇಕು.ಹಾಗಾಗಿ ಸಾಯಬೇಡ.ನಮ್ಮನ್ನು ಹುಟ್ಟಿಸಿದ ದೇವರಿಗೆ ನಮ್ಮನ್ನು ಕರೆಸಿ ಕೊಳ್ಳುವ ಕ್ಯಾಲೆಂಡರ್ ಇಟ್ಟಿರು ತ್ತಾನೆ. ಹಾಗಾಗಿ ಸಾವಿನ ಬಗ್ಗೆ ತಲೆ ಕೆಡಿಸಿೊಳ್ಳುವುದಿಲ್ಲ ಎಂದು ನಿರ್ಧರಿಸಿದರೆ ನಮ್ಮ ಹಾದಿ ತೆರೆದು ಕೊಳ್ಳುತ್ತದೆ.
ಸಮಸ್ಯೆ ಎಂದರೆ ಕೀಲಿಕೈ ಇರುವ ಪೆಟ್ಟಿಗೆ ಇದ್ದ ಹಾಗೆ. ಹುಡುಕಿ ತೆಗೆಯುವ ತಾಳ್ಮೆ. ಇರಬೇಕು ಅಷ್ಟೆ.
ಮೂಕ ಪ್ರಾಣಿಗಳು ಸಹ ಕೊನೆಯ ಉಸಿರಿನ ವರೆಗೆ ಜೀವ ಉಳಿಸಿ ಕೊಳ್ಳಲು ಹೋರಾಡುವಾಗ ನಮಗೇನು ಧಾಡಿ ಎಂದು ಪ್ರಶ್ನಿಸಿ ಕೊಳ್ಳಬೇಕು.ತಲೆಯಲ್ಲಿ ಸಾವಿನ ವಿಚಾರ ಕಿತ್ತಿ ಒಗೆದರೆ ನೂರಾರು ದಾರಿ ಕಾಣಿಸಿ ಕೊಳ್ಳುತ್ತದೆ. ರಾತ್ರಿ ಕಳೆದರೆ ಬೆಳಗಾಗುವಂತೆ ನಮ್ಮ ಜೀವನದಲ್ಲಿ ಕೂಡ ದೇವರು ಸೂರ್ಯೋದಯ ಇಟ್ಟಿದ್ದಾನೆ ಎಂದು ತಿಳಿದು ಕೊಂಡರೆ ಜೀವನೋತ್ಸಾಹ ತಂತಾನೇ ಚಿಗುರುತ್ತದೆ ಅಲ್ಲವೇ?.ಏನಂತೀರಾ



