ಕವಿ ಸಂಗಾತಿ
ನಮ್ಮ”ಪ್ಯಾರಿ ಕವಿ”
ಎ.ಎಸ್. ಮಕಾನದಾರ


ಬಯಲ ಬದುಕಿನ ಕವಿ, ಅಕ್ಕಡಿ ಸಾಲಿನ ಕವಿ, ಪ್ಯಾರಿ ಪದ್ಯದ ಕವಿಗಳೆಂದೆ ಖ್ಯಾತಿಗೊಂಡ ಎ.ಎಸ್. ಮಕಾನದಾರ ಅವರ ಗಜಲ್ ಗಳು ಮಹಾರಾಷ್ಟ್ರ ರಾಜ್ಯದ ಎರಡು ವಿಶ್ವ ವಿದ್ಯಾಲಯಗಳ ಪಠ್ಯ ಪುಸ್ತಕ ದಲ್ಲಿ ಪಠ್ಯ ಪುಸ್ತಕ ದಲ್ಲಿ ಸೇರ್ಪಡೆಯಾಗಿವೆ
ಮಹಾರಾಷ್ಟ್ರ ರಾಜ್ಯ ದ ಕೊಲ್ಲಾಪುರ ನ ಶಿವಾಜಿ ವಿಶ್ವವಿದ್ಯಾಲಯ ದ ಬಿ ಎ. ಎರಡನೇ ಸೆಮಿಸ್ಟರ್, ಸೊಲ್ಲಾಪೂರದ ಪುಣ್ಯ ಶ್ಲೋಕ ಅಹಲ್ಯಾ ದೇವಿ ಹೋಳ್ಕರ್ ವಿಶ್ವ ವಿದ್ಯಾಲಯದ ಬಿ ಕಾo ಮೂರನೇ ಸೆಮಿಸ್ಟರ್ ಹಾಗೂ( ಬಿ ವಿ. ಎ )ಬ್ಯಾಚುಲರ್ ಯೂಸುವಲ್ ಆರ್ಟ್ಸ್ ಮೂರನೇ ಸೆಮಿಸ್ಟರ್ ಗೆ ಕವಿ ಮಕಾನದಾರ ಅವರ ಎರಡು ಗಜಲ್ ಗಳು ಪಠ್ಯ ಪುಸ್ತಕ ದಲ್ಲಿ ಸೇರ್ಪಡೆ ಯಾಗಿವೆ.
ಹಿರಿಯ ಸಾಹಿತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಸಿದ್ದರಾಮ ಹೊನ್ಕ ಲ್ ಅವರು ಪ್ರಧಾನ ಸಂಪಾದಕರಾಗಿ ಸೊಲ್ಲಾಪುರ್ ಕೊಲ್ಲಾಪುರ ವಿಶ್ವ ವಿದ್ಯಾಲಯ ಗಳ ಕನ್ನಡ ವಿಭಾಗದ ಮುಖ್ಯಸ್ಥ (ಬಿ ಓ ಎಸ್ ) ಡಾ ಗುರುಸಿದ್ದಯ್ಯ ಸ್ವಾಮಿ ಗುಲ್ಬರ್ಗ ವಿಶ್ವ ವಿದ್ಯಾಲಯ ದ ಪ್ರಾಧ್ಯಪಕಿ, ಗಜಲ್ ಕವಯಿತ್ರಿ ಡಾ. ಪ್ರೇಮಾ ಹೂಗಾರ ಅವರ ಸಂಪಾದಕತ್ವ ದಲ್ಲಿ ಪ್ರಕಟಗೊಂಡ “ಗಜಲ್ ಧಾರೆ “
ಸಂಕಲನ ದಲ್ಲಿನ ಎರಡು ಗಜಲ್ ಗಳು ಪಠ್ಯ ವಾಗಿವೆ.
ಗಜಲ್ ಧಾರೆ ಸಂಕಲನ ದಲ್ಲಿ ನಾಡಿನ ಖ್ಯಾತ ಗಜಲ್ ಕಾರರಾದ ನಾಡೋಜ ಶಾಂತರಸ, ಕವಯತ್ರಿ ಎಚ್ ಎಸ್ ಮುಕ್ತಯಕ್ಕಾ, ಡಾ ಸರಜೂ ಕಾಟ್ಕರ್, ಶೂದ್ರ ಶ್ರೀನಿವಾಸ್, ಡಾ. ಬಸವರಾಜ್ ಸಬರದ, ಡಾ. ಕಾಶೀನಾಥ್ ಅಂಬಲಗೆ, ಸಂಗಮೇಶ ಬಾದವಾಡಗಿ, ಡಾ ಗಿರೀಶ್ ಜಕಾಪುರೆ, ಚಿದಾನಂದ್ ಸಾಲಿ, ಮುಂತಾದ ಗಜಲ್ ಸಾಹಿತ್ಯ ದಿಗ್ಗಜರ ಗಜಲ್ ಗಳ ಜೊತೆಗೆ ಮಕಾನದಾರ ಅವರ ಗಜಲ್ ಗಳೂ ಸೇರ್ಪಡೆ ಗೊಂಡಿದ್ದು ವಿಶೇಷ.
ಕುವೆಂಪು ವಿಶ್ವ ವಿದ್ಯಾಲಯ ದ ಬಿ ಎ. ಬಿ ಕಾಮ್. ಬಿ ಎಸ್ ಸಿ, ಬಿ ಎಸ್ ಡಬ್ಲುನ ಮೊದಲ ಸೆಮಿಸ್ಟರ್ ಕನ್ನಡ ನುಡಿ ಸಂಪದ ಭಾಗ 1ರ ಪಠ್ಯ ಪುಸ್ತಕ ದಲ್ಲಿ ಲಂಕೇಶ್ ಅವರ ಕವಿತೆ ಜೊತೆಗೆ ಮಕಾನದಾರ ಅವರ ಅಮ್ಮನ ಬಿಕ್ಕಳಿಕೆ ನಿಲ್ಲಿಸುವಿರಾ ಕವಿತೆ ಪಠ್ಯವಾಗಿದ್ದನ್ನಿಲ್ಲಿ ಸ್ಮರಿಸ ಬಹುದು.
ಮಕಾನದಾರ ಅವರ ಗಜಲ್ ಗಳು ಮರಾಠಿ ನೆಲದಲ್ಲಿ ಕನ್ನಡದ ಕಂಪು ಬಿರುತ್ತಿರುವುದಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ್ ಹಾಗೂ ಪದಾಧಿಕಾರಿಗಳು,ಹಿರಿಯ ನಿವೃತ್ತ ಉಪನ್ಯಾಸಕರಾದ ಆರ್. ಎಫ್. ಲೋಟಗೇರಿ,ಡಾ.ಶರಣ ಬಸವ ವೆಂಕಟಾಪುರ, ನ್ಯಾಯವಾದಿ ಎಸ್. ಕೆ ನದಾಫ್. ಡಾ. ಲತೀಫ್. ಕುನ್ನಿಬಾವಿ ಜನಪದ ವಿಶ್ವ ವಿದ್ಯಾಲಯದಸಹಾಯಕ ಕುಲಸಚಿವ ಷಹಜಹಾನ್ ಮುದಕವಿ, ಬಣ್ಣದ ಆರ್ಟ್ ಅಡ್ಡಾದ ಕಲಾವಿದ ವಿಜಯ್ ಕಿರೆಸೂರ್ ನ್ಯಾಯಾಂಗ ಇಲಾಖೆಯ ಬಂಧುಗಳು, ಗದಗ ಪರಿಸರದ ಸಾಹಿತಿ ಮಿತ್ರರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ


