ಶೋಭಾ ಮಲ್ಲಿಕಾರ್ಜುನ ಅವರ ಗಜಲ್

ಕಲೆಯ ಕಲಿಸಿತು ಬದುಕು ಕಲೆತು ಬಿಡಲು
ಕಷ್ಟಗಳ ಕಪಿಮುಷ್ಠಿಯಲಿ ಕಳಿತು ಬಿಡಲು

ಕುಲುಮೆಯ ಕಾವಿಗೆ ಕಬ್ಬಿಣದಂತೆ ಕರಗಲು
ಕಾಲನ ಕೈ ಗೊಂಬೆಯಾಗಿ ಕುಳಿತು ಬಿಡಲು

ಕಲ್ಲು ಕಟ್ಟಿಗೆಯನ್ನೂ ಅರಿತು ನಡೆಯಲು
ಕಡು ಭಾವಗಳನೂ ಮರೆತು ಬಿಡಲು

ಕಿಡಿಗಳು ಸಿಡಿದರೂ ಒಡಲ ಸುಡಲು
ಕಲಿಸಿತು ಬೂದಿಯೊಳಗೇ ಅವಿತು ಬಿಡಲು

ಕೊಡಲಿಯಂತೆ ಬಂಧಗಳ ಕಡಿದು ಕೆಡವಲು
ಕಾಡ್ಗಿಚ್ಚಿನಲೂ ಕಂಗೊಳಿಸಿ ಶೋಭಿಸಿ ಬೆರೆತು ಬಿಡಲು


2 thoughts on “ಶೋಭಾ ಮಲ್ಲಿಕಾರ್ಜುನ ಅವರ ಗಜಲ್

Leave a Reply