ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

.

ತೈಲವಿಲ್ಲದೆ ದೀಪ ಹೊತ್ತೀತು ಹೇಗೆ ಬೆಳಕು ಹಬ್ಬೀತು ಹೇಗೆ /
ಒಲವಿಲ್ಲದೆ ಹೃದಯ ಮಿಡಿದೀತು ಹೇಗೆ ಮನವು ಹಾಡೀತು ಹೇಗೆ /

ಇಂದು ಮುಳುಗಿದ ಸೂರ್ಯ ನಾಳೆ ಬಂದೇ ಬರುವನು /
ಪ್ರೀತಿ ಇಲ್ಲದೆ ಬೆಳಕು ಹರಿದೀತು ಹೇಗೆ ಭರವಸೆ  ಹುಟ್ಟೀತು ಹೇಗೆ /

ಪ್ರತಿ ರಾತ್ರಿ ಚಂದ್ರ ತಂಪು ಬೆಳಕನು ತರುವನು /
ಒಗ್ಗಟ್ಟಿಲ್ಲದೆ ಜೇನು ಕಟ್ಟೀತು ಹೇಗೆ ಬೆವರು ಸಿಹಿಯಾದೀತು ಹೇಗೆ /

ಭುವಿಯು ತಿರುಗುತ್ತಿದೆ ನಿತ್ಯ ನಿರಂತರ /
ಕರಿ ಮುಗಿಲು ಇಲ್ಲದೆ ಮೋಡ ಕಟ್ಟೀತು ಹೇಗೆ ಮಳೆಯು ಸುರಿದೀತು ಹೇಗೆ /

ಡೊಂಕು ಬಾಲದ ಹಗಲು ವೇಷದ ನಾಯಕರೇ ತುಂಬಿಹರು /
ನೀತಿ ಇಲ್ಲದೆ ಧರ್ಮ ಉಳಿದೀತು ಹೇಗೆ ಶಾಂತಿ ನೆಲೆಸೀತು ಹೇಗೆ /


About The Author

Leave a Reply

You cannot copy content of this page

Scroll to Top