ಗಜಲ್ ಸಂಗಾತಿ
ಉಮೇಶಬಾಬು ಎಂ. ಅವರ ಗಜಲ್


ದಿಕ್ಕು ಕಾಣದ ಕುರುಡು ಪ್ರೀತಿಗೆ ದೃಷ್ಟಿ ಕೊಡದೆ ಹೋದೆ
ದಕ್ಕದಾದ ಸಂಬಂಧಕೆ ತಕ್ಕ ಹೆಸರು ಇಡದೆ ಹೋದೆ
ಮೋಜು ಮಸ್ತಿಯಲಿ ಆಡುವ ವಸ್ತುವೆ ಮನಸೆಂಬುದು ಗೆಳತಿ
ಗಾಜು ಒಡೆದು ಚೂರಾದರೂ ನೀ ಕನಿಕರವ ಪಡದೆ ಹೋದೆ
ಲೆಕ್ಕವಿರದ ನೆನಪುಗಳ ಬುತ್ತಿ ದಾಹಕ್ಕೆ ಸೆಲೆಯು ಬತ್ತಿ
ದುಃಖ ತೋಡಿಕೊಳಲು ಕಣ್ಣಲೆರಡ್ಹನಿಯ ಬಿಡದೆ ಹೋದೆ
ಯುದ್ಧ ಸಾರದೆ ಪ್ರೇಮ ವ್ಯೂಹದಿ ಕದ್ದು ಹೃದಯವಾಳಿ
ಗೆದ್ದ ಕುರುಹಿಗೆ ಸಾಮ್ರಾಜ್ಯಕೆ ಧ್ವಜವೊಂದ ನೆಡದೆ ಹೋದೆ
ಯಾವ ಜನ್ಮಕೆ ತಾರೀಖು ಮುಹೂರ್ತವಿಟ್ಟು ಬಾಬು
ಜೀವ ತೆಗೆದು ಉಸಿರಾಡ ಬಿಟ್ಟು ಹೆಣವನ್ನು ಸುಡದೆ ಹೋದೆ
ಉಮೇಶಬಾಬು ಎಂ.




ಗಜಲ್ ಸಾಮ್ರಾಟ , ನವ ತರುಣಕ್ಕೋಂದು ಹೋಸ ಹೇಜ್ಜೆ, ವಿಶೇಷ ಶಬ್ದಗಳ ಜೋಡಣಿಯ, ಕರ್ನಾಟಕದಲ್ಲಿ ಎಲ್ಲಿಯು ಸಿಗದ, ಹೋಸ ಹೋಸ,
ಭಾವನೆಗಳ ಬರಹಗಾರ ಎಕೈಕ ವೀರ, ಶ್ರೀ ಉಮೇಶ
ಬಾಬು ಸಾಸಾಬಾಳ, ತಾ, ಚಿತ್ತಾಪುರ, ಜಿಲ್ಲೆ ಕಲಬುರ್ಗಿ.
ಇವರಿಗೆ ಹೃತ್ಪೂರ್ವಕ ಅಭಿನಂದನೆಗಳು..
ಸರ್…
Super Mama
Thank you for your kind appreciation.
ಅದ್ಬುತ ಸೃಜಶೀಲ ಚಿಂತನೆಯ ಗಜಲ್
ನಿಜಕ್ಕೂ ಶ್ಲಾಘನೀಯ ಶ್ರೇಷ್ಠ ಗಜಲ್ ಹಂಚಿಕೊಂಡ ಪ್ರೀತಿಗೆ ಶರಣು
ಕನ್ನಡದ ಗಜಲ್ಗಳ ಸರಮಾಲೆ ಹೀಗೆ ಶುರುವಾಗಲಿ