ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಟ್ಟಿ ದುಪ್ಪ ತಿಳಿದುಪ್ಪಕ್ಕೆ ಭೇದ ಉಂಟೇ ಅಯ್ಯ
ದೀಪಕ್ಕೆ ದೀಪ್ತಿಗೆ ಭೇದ ಉಂಟೆ ಅಯ್ಯ?
ಅಂಗಕ್ಕೆ ಆತ್ಮಕ್ಕೆ ಭಿನ್ನ ಉಂಟೆ ಅಯ್ಯ
ಎನ್ನಂಗವನು ಶ್ರೀಗುರುವು ಮಂತ್ರವ ಮಾಡಿ ತೋರಿದವನಾಗಿ
ಸಾವಯವಕ್ಕೆ ನಿರವಯಕ್ಕೆ ಭಿನ್ನವಿಲ್ಲಯ್ಯ
ಚೆನ್ನಮಲ್ಲಿಕಾರ್ಜುನನ ಬೆರೆಸಿದವಳ ನೇನೆಂದು ನುಡಿಸುವಿರಯ್ಯ

ಗಟ್ಟಿ ತುಪ್ಪ ಹಾಗೂ ತಿಳಿ ತುಪ್ಪ ಎಂದು ಭೇದ  ಮಾಡಲು ಆಗದು .
ಸವಿಯಲಿ ರುಚಿ ಒಂದೇ ಇರುವಾಗ, ಅದನ್ನು ಹೇಗೆ? ಭೇದ ಮಾಡಲು ಆಗುವುದು .
ಬೆಣ್ಣೆಯನ್ನೇ ಚೆನ್ನಾಗಿ ಕಾಯಿಸಿದರೆ ,ತುಪ್ಪ ಆಗುವುದು .ಹಾಗೇ ಅಕ್ಕನವರ ಅನುಭಾವದ ವಚನದ ನೆಲೆಯೂ ಕೂಡಾ . ವ್ಯಕ್ತಿಯ ವ್ಯಕ್ತಿತ್ವ ತಿಳಿ ತುಪ್ಪ ಹಾಗೂ ಗಟ್ಟಿ ತುಪ್ಪದ ಹೋಲಿಕೆ .ಆಯಾ ವ್ಯಕ್ತಿಯ ವ್ಯಕ್ತಿತ್ವದ ಅನಾವರಣ.
ಮೃದು ಧೋರಣೆ ಮನ ಒಂದು ಆದರೆ, ಗಟ್ಟಿ ತುಪ್ಪದ ಮನ ಮತ್ತೊಂದು .
ಅಕ್ಕನವರ ಅನುಭಾವದ ನೆಲೆಯಲ್ಲಿ ನೋಡಿದಾಗ ,ಇಲ್ಲಿ ಅಕ್ಕ ಹಾಗೂ ಚೆನ್ನಮಲ್ಲಿಕಾರ್ಜುನ ಇವರಿಬ್ಬರ ದೇಹಗಳು, ಬೇರೆ ಬೇರೆ ಅಂತಾ ಕಂಡು ಬಂದಿದ್ದರೂ, ಆತ್ಮದ ಅರಿವು ಒಂದೇ ಎನ್ನುವರು ಅಕ್ಕಾ .

ಅದು ಹೇಗೆ ಎಂದರೆ ,ಬೆಳಗುವ ದೀಪವಿದ್ದಂತೆ.ದೀಪವು ಕತ್ತಲನ್ನು ಓಡಿಸಿ ಬೆಳಕನ್ನು ನೀಡುವುದು . ದೀಪ್ತಿಯು ಇಲ್ಲಿ ದೀಪದ ಬೆಳಕು. ಅಂದರೆ ದೀಪ್ತಿಯೂ ಕೂಡಾ ಒಂದು ರೀತಿಯಲ್ಲಿ ನಮ್ಮ ಅಜ್ಜಾನವನ್ನು ಓಡಿಸಿ ಜ್ಞಾನದ ಜ್ಯೋತಿಯನ್ನು ಬೆಳಗಿಸುವ ಗುಣ . ದೀಪ ಹಾಗೂ ದೀಪ್ತಿ ಎರಡರ ಗುಣ ಲಕ್ಷಣ ಒಂದೇ. ಬೆಳಕನ್ನು ನೀಡುವುದು .ಹಾಗೇ ಆತ್ಮ ಮತ್ತು ಪರಮಾತ್ಮ ಒಂದೇ ಎನ್ನುವರು ಅಕ್ಕ.ಅಕ್ಕನವರ ಭಾವ ದೃಷ್ಟಿಯಲ್ಲಿ
ಅಂಗ ಹಾಗೂ ಆತ್ಮ ಎರಡೂ ಒಂದೇ ಎನ್ನುವರು .ಈ ಅಂಗವು  ಆ ಪರಮಾತ್ಮನ ಸ್ವರೂಪ ಚೆನ್ನಮಲ್ಲಿಕಾರ್ಜುನನಲ್ಲಿ ಒಂದಾಗಿದೆ ಎನ್ನುವರು .
ಇಲ್ಲಿ ಭೇದ ಅಳಿಯಲು ಸಾಧ್ಯವಿಲ್ಲ ಎನ್ನುವರು .
ನನ್ನ ಈ ಅಂಗವನ್ನು ಅಂದರೆ, ಈ ಶರೀರವನ್ನು, ಶ್ರೀ ಗುರುವು ಮಂತ್ರವ ಮಾಡಿ ತೋರಿದವನಾಗಿ ,ಅಲ್ಲಿ ಸಾವಯವ ಹಾಗೂ ನಿರವಯಕ್ಕೆ ಭೇದ ಹಾಗೂ ಭಿನ್ನವಿಲ್ಲ ಎನ್ನುವರು . ನನ್ನ ದೀಕ್ಷಾ ಗುರು ಈ ಮಾಂಸ ಪಿಂಡವನ್ನು ಮಂತ್ರ ಪಿಂಡವನ್ನಾಗಿಸಿ , ಆತ್ಮನು ಈ ತನುವಿನಲ್ಲಿ ಇದ್ದರೂ ಕೂಡಾ ಅದು ಮಂತ್ರಮಯವಾಗಿದೆ .ಕಾರಣ ಈ ಶರೀರವು ಅಂದರೆ ಅಂಗವು ಲೌಕಿಕಕ್ಕೆ ಬರಲಾರದು .ಸಾವಯವಕ್ಕೂ ,ನಿರವಯಕ್ಕೂ, ಭಿನ್ನ ಇಲ್ಲ ಎಂದೆನ್ನುವೆ .ಈ ಶರೀರ ಇರುವುದು ಎನ್ನ ಚೆನ್ನ ಮಲ್ಲಿಕಾರ್ಜುನನಿಗಾಗಿಯೇ ಹೊರತು ಲೌಕಿಕಕ್ಕೆ ಅಲ್ಲ. ನಾನು ಚೆನ್ನಮಲ್ಲಿಕಾರ್ಜುನನನ್ನು ಬೆರಸಿದವಳು.ನನ್ನನ್ನೇನು ಮಾತನಾಡಿಸುವಿರಿ.ನಿಮ್ಮ ಮಾತಿನ ಅವಶ್ಯಕತೆ ಎನಗಿಲ್ಲ ಬೆರೆಸಿ ಬೇರಿಪ್ಪಲಾದೀತೆ? ಚೆನ್ನಮಲ್ಲಿಕಾರ್ಜುನನಯ್ಯ ಇಲ್ಲಿ ಮಾತನಾಡಲು ಏನೂ ಉಳಿದಿಲ್ಲ. ಏನೆಂದು ನುಡಿಸುವಿರಯ್ಯ . ನಿಮ್ಮ ಜೊತೆಗೆ ನನಗೇತಕೆ ಮಾತು.ಚೆನ್ನಮಲ್ಲಿಕಾರ್ಜುನನನ್ನು ಬೆರೆತುಕೊಂಡವಳಿಗೆ ಇದು ನಿರಾಕಾರದ ಸಾಕಾರದ ಸುಳಿವು ಚೆನ್ನಮಲ್ಲಿಕಾರ್ಜುನಾ .


About The Author

Leave a Reply

You cannot copy content of this page

Scroll to Top