ಕಾವ್ಯ ಸಂಗಾತಿ
ಸುಧಾ ಪಾಟೀಲ
ʼನೀನುʼ

ಹನಿ ಹನಿ ಸುರಿಯುವ
ಮಳೆ ಹನಿ ನೀನು
ಭಾವಬೀಜ ಬಿತ್ತಿದ
ಒಲವ ಬಳ್ಳಿ ನೀನು
ಹದವಾಗಿ ಬೆರೆಯುವ
ಕಲೆಯ ಅಸ್ಮಿತೆ
ನೀನು
ಭಾವಗಳ ತೋರಣದ
ಸರಮಾಲೆಯ ಪುಳಕ
ನೀನು
ಆಗಾಗ ಅಲ್ಲಲ್ಲಿ
ಮಿನುಗುವ
ಚಮತ್ಕಾರ ನೀನು
ಆಗಸದ ಚಂದ್ರನ
ಲಾಲಿತ್ಯದಲ್ಲಿ ಮುಳುಗಿಸಿ
ಮೆಲ್ಲನೆ ಹಿಡಿದೆತ್ತುವ
ಚತುರಗಾರ ನೀನು
ಭಾವಗಳ ಓಲೆಯಲ್ಲಿ
ಸರಿಗಮಪದದ ನಿನಾದ
ಹೊರಡಿಸುವ ಜಾದೂಗಾರ
ನೀನು
ಭರವಸೆಯ ತೊಟ್ಟಿಲಲ್ಲಿ
ತೂಗುವ ಕರುಣಾಸಾಗರ
ನೀನು
ಬರಿದಾದ ಮನವ
ಬೊಗಸೆಯೆತ್ತಿ ತುಂಬುವ
ಮಾಂತ್ರಿಕ ನೀನು
ಕಡಿದಾದ ರಸ್ತೆಯಲಿ
ಆಪತ್ಭಾಂದವನಂತೆ
ರಕ್ಷಿಸುವವನು ನೀನು
ಸುಧಾ ಪಾಟೀಲ

