ಕಾವ್ಯ ಸಂಗಾತಿ
ಹಮೀದಾ ಬೇಗಂ ದೇಸಾಯಿ
ʼಅಂತರಂಗದಲೆ….ʼ


ಮನೋಶರಧಿಯಲಿ
ಅಡಗಿದ ಭಾವಚಿಪ್ಪುಗಳು
ತವಕಿಸುತಿಹವು
ಅಲೆಯಾಗಿ ತೇಲಲು..
ಪಕ್ವಗೊಳುತಿಲ್ಲ
ಅದೇಕೋ ಚಿಪ್ಪುಗಳು
ಭಾರ ಮನದಿಂದ
ಎದ್ದೇಳಲಾರದೆ…
ಚೈತನ್ಯದ ಬೆಳಕು
ಅಂತರಂಗದೊಳು
ಇಳಿಯದಾಗಿದೆ
ಮನದಾಳಕೆ..
ಬಿಡಿಸಲಾಗದೆ
ಹೆಣಗಾಡುತಿವೆ
ಚಿಪ್ಪಿನೊಳಗಣ
ಭಾವಕಣಗಳು..
ಕಾದು ಕುಳಿತಿವೆ
ಸ್ವಾತಿ ಹನಿ ಹನಿಗೆ
ಮುತ್ತಾಗಲು;
ಒಲವಿನಲೆಯಾಗಿ
ತೇಲಿ ಬರಲು…
ಹಮೀದಾ ಬೇಗಂ ದೇಸಾಯಿ.




ಭಾವದಲೆಗಳ ಚಿತ್ರಣ ಸೊಗಸಾಗಿ ಮೂಡಿಬಂದಿದೆ.
ಸ್ಪಂದಿಸಿದ ತಮಗೆ ಧನ್ಯವಾದಗಳು
ಹಮೀದಾಬೇಗಂ.