ಕಾವ್ಯ ಸಂಗಾತಿ
ಎಂ. ಬಿ. ಸಂತೋಷ್
ನೀನಿರಬೇಕು ಮಹಾರಾಣಿಯಂತೆ


ಏಕೆ ಗೆಳತಿ ಈ
ಮೂಕವೇದನೆ?
ಹೇಳಬಾರದೆ ಮನಸ್ಸು ಬಿಚ್ಚಿ
ನಿನ್ನ ಮನದ ಭಾವನೆ
ನನ್ನ ನೆನಸಿ
ಬಳಿಗೆ ಬಂದಿರುವೆ
ನನ್ನನ್ನೇ ನೀನಿಂದು ಬಯಸಿ
ಚಿಂತಿಸದಿರು ಗೆಳತಿ
ಹೆತ್ತ ತಾಯಿಯನ್ನೇ
ಮರೆಸುವಂತ ಪ್ರೀತಿಯ
ನಾ ನಿನಗಿಂದು ನೀಡುವೆ
ನೀ ನಗಬೇಕು ನನಗಾಗಿ
ಮಲ್ಲಿಗೆ ಹೂವಿನಂತೆ
ಅರಳಬೇಕು ಬದುಕಲ್ಲಿ
ಸೂರ್ಯಕಾಂತಿಯಂತೆ
ಬೆಳೆಯಬೇಕು ನೀ
ಆಲದ ಮರದಂತೆ
ನೆರಳಾಗಬೇಕು ಮನುಕುಲಕೆ
ಹೊಂಗೆಯ ಮರದಂತೆ
ಮನದ ವೇದನೆಯ ಮರೆತು
ಸಾಧನೆಯ ಹಾದಿಯಲಿ
ನೀ ನಡೆಯಬೇಕು
ಘಮಘಮಿಸುವ
ಮಲ್ಲಿಗೆಯ ಹೂವಿನಂತೆ
ಇರಬೇಕು ನೀ ಎನ್ನ ಮನದಲ್ಲಿ
ಮಹಾರಾಣಿಯಂತೆ…….
ಎಂ. ಬಿ. ಸಂತೋಷ್.




ತುಂಬಾ ಚೆನ್ನಾಗಿದೆ..