ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

This image has an empty alt attribute; its file name is images-5-1.jpg

ಬಂಧ -ಸಂಬಂಧ ಕಳಚಿ
ಬಿಡುಗಡೆಯ- ಬೇಡಿಗೆ
ಬದ್ಧರಾದ ಬಂಧಿತರಿಗೆ
ನೋಡಿ ನೊಂದಿದೆ ಮನ….

ವರ್ಷಗಟ್ಟಲೆ ಕೂಡಿ ಸುಖಿಸಿ
ನಲಿದು -ಒಲಿದು – ಬಲಿತು
ಸಣ್ಣಅಪ ಮಾತುಗಳಿಗೆ
ಕಳಚಿ  ಬಿಟ್ಟಿತೇ…. ?

ಕೂಡಿ ಕಂಡ ಹೊಂಗನಸು
ಹುಟ್ಟಿದ ಕರುಳು ಕುಡಿಯ
ಮರೆತು ,ತಮ್ಮ- ತಮ್ಮ
ಅಹಂ  ಸಂತೈಸಲು ಹೊರಟ
ಮರೆತು ಒಲವು -ಪ್ರೇಮ..

ತಂದೆ -ತಾಯಿ- ಬಳಗ
ಬಿಟ್ಟು ದೂರ ಹೊಂಟವರ
ಕಂಡು ಮನ ಮರ-ಮರ
ಮರಗಿತ್ತು, ಕತ್ತಲೆಯ ಕಾರಿ ……

ಎತ್ತ  ಇಳಿದಿದೆ- ಎತ್ತಣ
ಹೊರಳಿದೆ  ಸಂಸ್ಕೃತಿಯ
ಬೇರ, ಸಂಸ್ಕಾರ ಮರೆಮಾಚಿ
ಹಿರಿ ಆಯಾಮ ಚೌಕಟ್ಟ….

ಮದುವೆ-ಬಂಧನ-  ದಾಟಿ
ಬಾಂಧವ್ಯ ಜಂಜಾಟ ಆಟ,
ಅಭಿಮಾನದ  ಕೂಟ …
ಮಕ್ಕಳ -ಕುಟುಂಬದ ಆತ್ಮ –

ವಂಚಿಸಿ ನೂಕಿ ನಿಂದಿವೆ,
ಅರೆ  ಕ್ಷಣದಲ್ಲಿ ಎಲ್ಲ ತೀರಿಸಿ
ನೀನು ಬೇರೆ -ನಾನು ಬೇರೆ
ಕಳಚಿ ಬಂಧನದ ಕೊಂಡಿ..

ಸೋಲು ಗೆಲುವಿನ ಆಣತಿ
ನಡೆದು ತೀರದ ಪಯಣದತ….
ಬಿಡುಗಡೆಯ ನೊಗ ಹೋತು….
ಕರಳು ಕೊರೆಯುವ ಮಾತು …


About The Author

3 thoughts on “ಸವಿತಾ ದೇಶಮುಖ ಕವಿತೆ ʼಬಿಡುಗಡೆʼ”

  1. ತುಂಬಾ ಚೆನ್ನಾಗಿ ಬರೆದಿದ್ದೀರಿ ಸವಿತಾ ಮನ ಮುಟ್ಟುವ ಹಾಗೆ ಹಾರ್ದಿಕ ಶುಭಾಶಯಗಳು ಅಭಿನಂದನೆಗಳು

  2. ತುಂಬಾ ಚೆನ್ನಾಗಿ ಬರೆದಿದ್ದೀರಿ ಮೇಡಂ ಅಭಿನಂದನೆಗಳು ತಮಗೆ

Leave a Reply

You cannot copy content of this page

Scroll to Top