ಕಾವ್ಯ ಸಂಗಾತಿ
ಸಹನಾ ವಿ. ಗುಮ್ಮಾನಿ-
ʼನನ್ನ ಕನಸುʼ


.
ನನ್ನ ಮಗುವಾಗಿ ನೀನು
ಮಡಿಲು ತುಂಬಿಸಿದೆ ನನ್ನ
ವರ್ಣಿಸಲು ಅಸಾಧ್ಯ ನನ್ನ
ಆ ಖುಷಿಯ ದಿನವನ್ನ
ಮಡಿಲಿನಲ್ಲಿ ನೀ ಮಲಗಿ
ನಗುವಾಗ ನೀ ಮುದ್ದಾಗಿ
ಅಮ್ಮನ ನೊವೆಲ್ಲ ಮಾಯ
ಜೀವನದ ಸಾರ್ಥಕತೆಯ ಭಾವ
ನಿನ್ನ ಆ ತೊದಲು ನುಡಿಯ
ಅಮ್ಮ ಈ ಮೊದಲ ಕರೆಯ
ನನ್ನ ಮನದ ಪೂರ್ಣತೆಯು
ಜಗವ ಮರೆಸೋ ಸಂಭ್ರಮವೂ
ಪುಟ್ಟ ಪಾದದಿ ಎದೆಯ
ಒದ್ದರೆ ನೀನು ಎಳೆಯ
ಕೈಗಳಲಿ ಕೊರಳ ಬಳಸಿದರೆ
ಬಂದಿಯಾದೆ ನಿನ್ನಯ ಪ್ರೀತಿಯಲಿ
ಎನ್ನ ಜೀವನದ ಕನಸು ನೀನು
ಅಮ್ಮನುಸಿರಿನ ಲಾಲಿ ನೀನು
ಬರೆಯುವೆ ನಿನಗಾಗಿ ಹಾಡನ್ನು
ಜೋಗುಳಕೆ ನೀ ಮಲಗು ಚಿನ್ನು.
——-
ಸಹನಾ ವಿ. ಗುಮ್ಮಾನಿ.




Sooooper.
ತುಂಬಾ ಚೆನ್ನಾಗಿ ಬರೆದಿದ್ದೀರಾ.
ನಮಗೆ ತುಂಬಾ ಇಷ್ಟಾ ಆಯ್ತು.