ಕಾವ್ಯ ಸಂಗಾತಿ
ರಾಶೇ..ಬೆಂಗಳೂರು
“ಉಗುರು”


ಉಗುರು ಬೆಳೆಸಬೇಕೆನಿಸುತ್ತದೆ
ಈ ಸಜ್ಜನ ಮುಖದ ವೇಷ ತೊಟ್ಟ ದುರ್ಜನರ ಮುಖವಾಡ ಕಳಚಲು
ನಯವಂಚಕರಂತೆ ಮಾತುಗಳಾಡಿ
ಸುಮ್ಮನೆ ಮೈಕ್ ಹಿಡಿದು ಅರಚುವ ಮಂದಿಯ ಮುಖ ಪರಚಿ ಹಾಕಲು..
ಉಗುರು ಬೆಳೆಸಬೇಕೆನಿಸುತ್ತದೆ
ಒಳಗೊಂದು ಹೊರಗೊಂದು ಮಾತನಾಡುವವರ ಬಟ್ಟೆ ಹರಿದು ಹಾಕಲು
ಬುದ್ದಿಜೀವಿಗಳ ವೇಷ ತೊಟ್ಟು ನಟಿಸುವವರ ಬಣ್ಣ ಕೆರೆದು ಹಾಕಲು
ಉಗುರು ಬೆಳೆಸಬೇಕೆನಿಸುತ್ತದೆ
ಸತ್ಯದ ತಲೆಯ ಮೇಲೆ ಹೊಡೆದ ಹಾಗೆ ಸುಳ್ಳು ಹೇಳುವವರ ಚರ್ಮ ಕಿತ್ತೊಗೆಯಲು
ಹೆಣ್ಣು ಶಿಶುಗಳ ಮೇಲೆ ಕಾಮಕಂಗಳ ಬೀರುವವರ ಕಣ್ಣು ಕಿತ್ತುಹಾಕಲು
ಉಗುರು ಬೆಳೆಸಬೇಕೆನಿಸುತ್ತದೆ
ಮಾಯ ಮಾತುಗಳಾಡಿ ನಂಬಿಸಿ ಮೋಸ ಮಾಡುವ ಗುಳ್ಳೆ ನರಿಗಳ ನರಗಳ ಕತ್ತರಿಸಿಹಾಕಲು
ಲಂಚ ಪಡೆದು ಬಡವರನೇಕರನು ಶೋಷಿಸುವ ಭ್ರಷ್ಟರ ಹೊಟ್ಟೆ ಬಗೆದು ಹಾಕಲು
ರಾಶೇ..
ಬೆಂಗಳೂರು




ನಮಸ್ತೆ ಸರ, ನಿಮ್ಮ “ಉಗುರು”ಕವನ ತುಂಬ ಮಾ ಮಿ೯ಕವೂ ಹೌದು ಮತ್ತು ದುಷ್ಟರನ್ನು ಟೀಕಿಸುವ ಹಿನ್ನೆಲೆಯೂ ಆಗಿದೆ. ಇದೇ ಶೀಷಿ೯ಕೆಯಡಿಯಲ್ಲಿ ೨೦೨೪ ರಲ್ಲಿ ನಾನೂ ನಿಮ್ಮ ಕವನಕ್ಕೆ ತದ್ವಿರುದ್ಧವಾಗಿ ಕವನವೊಂದನ್ನು ಬರೆದಿರುವೆ. ಸಹೃದಯರು ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಭಿನಂದನೆಗಳೊಂದಿಗೆ,
ಸೌ: ಸುನೀತಾ.
ಧನ್ಯವಾದಗಳು ಮೇಡಂ ಆ ಕವಿತೆಯನ್ನು ಹಾಕಿ ಓದೋಣ