ಕಾವ್ಯ ಸಂಗಾತಿ
ಇಮಾಮ್ ಮದ್ಗಾರ
ಕ್ಷಮಿಸಿ

ನಾಳೆಯ ಕುರಿತು ಕುತೂಹಲ ವಿಲ್ಲ
ನೆನ್ನೆಯ ಕುರಿತು ಬೇಸರವೂ ಇಲ್ಲ
ನೆನಪೇ ಹಾಗೇ ಮಳೆ ನಿಂತರೂ ಮರದ ಹನಿ ನಿಲ್ಲುವದಿಲ್ಲ.
ಬೇಕು ಬೇಡಗಳ ನಾಟಕ
ಬೇಕಿಲ್ಲ ನನಗೆ
ಇಲ್ಲ ಸಲ್ಲದ ನಡುವೆ ವಾಸ್ತವ ವೆಲ್ಲಿ ಹುಡುಕಲಿ
ನೀ ಎದೆಗಿರಿದ ಮಾತು ಕೊಳೆತು ನೋವಾಗಿ ಕೀವಾಗಿದೆ
ಮುಲಾಮು ಮೆತ್ತುವ ಕೈಗೇನಾಗಿದೆಯೋ ಮಿಸುಕುತ್ತಿಲ್ಲ
ಅರ್ಥವಿಲ್ಲದ ಶಬುದ
ಹಸಿವೇ ಇಲ್ಲದ ಊಟ
ಬುದ್ದಿಇಲ್ಲದ ಜ್ಞಾನ
ಪ್ರೇಮವಿಲ್ಲದ ಪ್ರೀತಿಯೂ
???
ಕನಸಿನ ಕದವೇ ಮುಚ್ಚಿ ಹೋಗಿದೆ ಮನಸಿಗೆ ಕಿಟಕಿಗಳಿಲ್ಲ
ಇರುವದೊಂದೆ ಬಾಗಿಲು ಅದಕ್ಕೆ ನೀ ಭದ್ರವಾಗಿ ಕೀಲಿ ಜಡೆದಿರುವೆ
ನನಗೆ ನೋಯಿಸಿ ಗೊತ್ತಿಲ್ಲ
ಈಗ ಪ್ರೀತಿಸಲೂ ಆಗುತ್ತಿಲ್ಲ
ಗುಪ್ತಮನಸಿನ ಕಾಗದದಿ
ಬರೆದು ಬರೆದು ನಾ ಸೋತುಬಿಟ್ಟೆ
ಈಗ ಬದುಕು ತೆರೆದಿದೆ
ಬರೆಯಲಾಗುತ್ತಿಲ್ಲ
ಕ್ಷಮಿಸಿ ಬಿಡು
ಕ್ಷಮಿಸುವ ತಪ್ಪು ನನ್ನಿಂದಾಗಿದ್ದರೆ
ಕ್ಷಮಿಸುವ ಅರ್ಹತೆ ನಿನಗಿದ್ದರೆ
ಕ್ಷಮಿಸಿ ಬಿಡು
ಇಮಾಮ್ ಮದ್ಗಾರ




