ಡಾ. ಮೀನಾಕ್ಷಿ ಪಾಟೀಲ ಅವರ ಕವಿತೆ “ನನ್ನ ನಿನ್ನ ನಡುವೆ”

ಮಾತಿನ ಮೌನದಲ್ಲಿ
ಏನೆಲ್ಲಾ ಮಾತನಾಡಿದವು
ಕಣ್ಣುಗಳು
ಕಣ್ಣ ಸನ್ನೆಯ ನಡುವೆ
ಬೆಸೆದ ಮನಸುಗಳು
ಕಡೆತನಕ ಉಳಿದಾವೆಯೇ
ಎಂಬ ಶಂಕೆ ಮೂಡಿದ್ದು ಸುಳ್ಳಲ್ಲ
ಹೇಗೆ ನಂಬುವುದು
ಹುಚ್ಚು ಮನಸ್ಸಿನ ಹುಡುಗನನ್ನು
ಹುಡುಗಾಟವಲ್ಲ ಬದುಕು,
ಹುಡುಕಬೇಕಷ್ಟೇ ಹುಡುಗತನದಲ್ಲಿ
ಜೀವನದ ಅರ್ಥ
ಕನಸುಗಳಿಗೀಗ
ಕಣ್ತುಂಬಿಕೊಳ್ಳುವ ಬಯಕೆ
ಉಳಿಯಬೇಕು ಕಣ್ಣಲ್ಲೇ
ಕನಸುಗಳೊಡೆದು
ಭಯದಲ್ಲಿ ಕಳೆಯಬೇಕು ಇರುಳ
ಅನಿಸಿತ್ತೊಮ್ಮೆ……
ಹಾಲುಗಲ್ಲದ ಹಸುಳೆಯ ನಗು
ನಿಷ್ಕಲ್ಮಶ ಮನಸ್ಸು
ಮುಗಿಲ ಮರೆಯ ಚಂದ್ರನಂತೆ
ಬೆಳದಿಂಗಳಾಗಿ ಬರುವೆ
ಎಂದು ಬಯಸಿದ್ದು ಬರಿ ಭ್ರಮೆ
ಮನದ ಸೂತಕ ಅಳಿದು
ಅಪ್ಪಿಕೊಂಡು ಬಿಡು ಒಮ್ಮೆ
ಭ್ರಮೆಯಳಿದು ಕಣ್ಣೆದುರಿನ
ತೆರೆಯ ಸರಿಸಿ


Leave a Reply

Back To Top