ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಈ ಜಗದ
ನಡುವೆ ಇರುವ ಬಂಧ
ಮಣ್ಣ ಸಾರದಿ
ಬಿತ್ತಿದಂತೆ ಹಸಿರು
ಅನುಬಂಧ ಉಸಿರಿಗೆ
ಭಾವಗಳ ನೋಟಗಳೂ
ಪಲ್ಲವಿಸಿ ಉಸಿರಾಗಿ
ಉಳಿದು ಹೋದ ಮಾತು
ಸುಂದರ ಹಂದರದ
ಗುರುತು ಇರಬೇಕು
ಎನಿಸುತ್ತದೆ ಬದುಕಿಗೆ
ಹರಿವ ಲಹರಿಯ
ಭಾವ ಭವದ ಹಕ್ಕಿಯ
ಕನಸಿನಂತೆ ನಿಂತು
ಉಪಕರಿಸುತ್ತದೆ ಮತ್ತೆ…
ಮೇಘ ಮಾಲೆಯದು
ಇಳೆಯ ಹಾಳೆಯಂತೆ
ಹನಿಯಾಗಿ ಜಿನುಗಿ
ಧರೆಗೆ ಇಳಿವಂತೆ
ಈ ನೆಲದ ತಂಪು
ಹಸಿರಾಗಿ ಹುಟ್ಟಿ
ಒಳಿತು ಮಾತಾಡಿದಂತೆ
ಚಿಗುರಿನ ನಗುವೊಂದು
ದಿನಗಳ ನೆನೆದು
ಪ್ರೀತಿಯ ಒಲವಲ್ಲಿ
ಹರಡಿ ನೆರಳಾಗುವ
ಮರದಂತೆ…….
ಮನೆ ಅಂಗಳದಿ ನಿಂತು
ಮುದ್ದು ಮಾತಿನ
ಮಗು ನಗು
ಸುಳಿವ ನೋಟಗಳ
ಗೆಲುವಾಗಿ ಉಳಿದು
ಬದುಕಾಗುತ್ತದೆ
ಹಾಗೇ………..


About The Author

Leave a Reply

You cannot copy content of this page

Scroll to Top