ಟಿ. ಎಸ ಗೊರವರ ಅವರ “ರೊಟ್ಟಿ ಮುಟಗಿ” ಕಿರು ಕಾದಂಬರಿ ಒಂದು ಅವಲೋಕನ ಸಾಕ್ಷಿ ಶ್ರೀಕಾಂತ ತಿಕೋಟಿಕರ ಅವರಿಂದ


ಇದು ಒಂದು ಕಿರು ಕಾದಂಬರಿ. ಆಧುನಿಕತೆ, ಓದು, ಟಿ. ವಿ ಮೊಬೈಲಗಳಿಂದ ದೂರ ಇರುವ ಹಳ್ಳಿಯ ಹುಡುಗನ ಬದುಕಿನ ಚಿತ್ರಣ ಈ ಕಾದಂಬರಿ. ಆರಂಭದಲ್ಲಿ ತಂದೆ ಕಳೆದುಕೊಂಡ ಮಗು ಮತ್ತು ತಾಯಿಯಯ ಮಮತೆಲ್ಲಿ ಮಿಂದ ಭಾವುಕ ಬಾಲಕನ ಕತೆ ಕಾಣಬಹುದು.
ಈ ಬಾಲಕ ತಾನು ಬೆಳೆದಂತೆ ತನ್ನ ಸುತ್ತಮುತ್ತಲಿನ ಪರಿಸರ ಮತ್ತು ಪ್ರಕೃತಿ ವಿಸ್ಮಯಗಳನ್ನು ಗಮನಿಸುತ್ತಾ ಓದುಗರನ್ನು ತನ್ನ ಜೊತೆಗೆ ಕರೆದುಕೊಂಡು ದನ ಮೇಯಿಸಲು ಹೋಗುತ್ತಾನೆ. ನಿಸರ್ಗವೇ ಅವನ ಪಾಠಶಾಲೆ. ಹಳ್ಳಿಯ ಸೊಗಡು, ಬದುಕಿನ ಅನಾವರಣ,  ಮಗುವಿನ ಭಾವುಕತೆ ಓದುಗರಲ್ಲಿ ಮೂಡಿಸುವುದರಲ್ಲಿ ಬರಹಗಾರರು ಯಶಸ್ವಿಯಾಗಿದ್ದಾರೆ.

ಕೆಲವು ಕಡೆ ಸ್ವಲ್ಪ ಕೆಲವು ಶಬ್ದ, ಬೈಗುಳ ಪ್ರಯೋಗಗಳು ಸೃಜನಾತ್ಮಕ ಓದುಗರಿಗೆ ಕಠಿಣ ಎನಿಸಬಹುದು ಆದರೂ ಒಂದು ಜನಾಂಗೀಯ ಜೀವನದ ನೈಜ ಚಿತ್ರಣ ಇಡಲೋಸ್ಕರ ಬರಹಗಾರರು ಅದನ್ನು ಸಹಜದಂತೆ ಬರೆದಿರುವದು ವಾಸ್ತವದ ಇನ್ನೂಂದು ಬದಿಯೂ ಹೌದು! ಪರಿಚಯವೂ ಹೌದು. ವಯೋ ಸಹಜ ಕುತೂಹಲದಿಂದ ಹೊರಟ ಬದುಕು ಸುಗಮವಾಗಿಯೇ ಕತೆಯಲ್ಲಿ ಗಟ್ಟಿಗೊಳ್ಳುವುದು. ಅನಾಥಭಾವದ ಏಕಾಂಗಿತನ ಕಳೆದು ಸಂಗಾತಿಯೊಂದಿಗೆ ಜೀವನ ಹೋರಾಟ ಹಳ್ಳಿಯ ನೈಜ ಚಿತ್ರಣ ಎತ್ತಿ ಹಿಡಿಯುವದು. ಹುಡುಗನಲ್ಲಿ ಆಗಾಗ ಕಾಣುವ ಭಾವಪರವಶತೆಯ ಒಂದು ವಿಭಿನ್ನ ನಡವಳಿಕೆ ಅಂತ್ಯದಲ್ಲಿ ಒಂದು ಅನಿರೀಕ್ಷಿತ ವಿಷಾದಕ್ಕೆ ಓದುಗರನ್ನು ಕೊಂಡೊಯ್ಯುತ್ತದೆ.


Leave a Reply

Back To Top