ಶೋಭಾ ಮಲ್ಲಿಕಾರ್ಜುನ್ ಚಿತ್ರದುರ್ಗ ಅವರ ಗಜಲ್

ಮೂರು ಗಂಟಿಗೆ ಹುಟ್ಟಿನ ನ0ಟನು ತೊರೆದು ಬಂದೆಯಾ ಸಾಕಿ
ಮೆಟ್ಟಿದ ಮನೆಯಲ್ಲಿ ಸಂಬಂಧ ಬೆಸೆದು ನಿಂದೆಯಾ ಸಾಕಿ

ಎದೆಯೊಳಗೆ ಧಗಧಗಿಸುವ ಜ್ವಾಲಾಗ್ನಿ ಉರಿದು
ತಣ್ಣಗಾಗಿಸಲು ಕಣ್ಣೀರಲಿ ಮಿಂದೆಯಾ ಸಾಕಿ

ಕರಗುವ ಕಂಗಳಿಗೆ ಕಾಡಿಗೆಯ ಬಳಿದು
ಕಪೋಲಗಳಿಗೆ ಕಾಪಿಡುವ ಕಲೆಯ ಕಲಿಸಿದೆಯಾ ಸಾಕಿ

ಉಸುರದ ಮಾತುಗಳಿಗೊಂದಿಷ್ಟು ಹಸಿರು ಬಣ್ಣವ ಸುರಿದು
ನಗುವ ಮಲ್ಲಿಗೆಯ ಹೆರಳೊಳಗೆ ಮುಡಿದೆಯಾ ಸಾಕಿ

ಬದುಕ ಸಿಹಿ ಕಹಿಗಳ ಸಂತಸದಿ ಕುಡಿದು
ಶೈಶವದಿಂದ ಶವವಾಗಿ ಶೋಭಾಯಾತ್ರೆ ಹೊರಟಿಯಾ ಸಾಕಿ


3 thoughts on “ಶೋಭಾ ಮಲ್ಲಿಕಾರ್ಜುನ್ ಚಿತ್ರದುರ್ಗ ಅವರ ಗಜಲ್

  1. ನಿಮ್ಮ ಗಜಲ್ ಗಳು ಉತ್ತಮ ಊರಣ ಹೊಂದಿ ಒಡಮೂಡುತ್ತಿವೆ…ಪ್ರತಿದಿನದ ಬರಹವೂ ಅಷ್ಟೇ ಉತ್ತಮ…ಸೋ ಆಲ್ ದಿ ಬೆಸ್ಟ್

    1. ನಿಮ್ಮ ಅಭಿಮಾನದ ಓದಿಗೆ ಮತ್ತು ಆತ್ಮೀಯ ಪ್ರತಿಕ್ರಿಯೆಗೆ ಧನ್ಯವಾದಗಳು

Leave a Reply

Back To Top