ಕೆ ಜೆ. ಪೂರ್ಣಿಮಾ ಅವರಕವಿತೆ,ಗೋಲ್ಡನ್ ಶವರ್ ಡೇ


ಗೋಲ್ಡನ್ ಶವರ್ ಡೇ
ಅಕ್ಷರದ ಅವ್ವ ಬೆನ್ನಿಗೆ ಬಿದ್ದೆನವ್ವ…
ನೂರು ಮಾತನಾಡದೆ ಉಸಿರು ಗಟ್ಟಿ ನೋವನುಂಡೆ ಅವ್ವ…
ಹೆಣ್ಣು ಜೀವ ಧರೆಗೆ ಇಳಿದ ಜಗದ ಸೃಷ್ಟಿ ದೈವ….
ಪ್ರಕೃತಿಯಾಗಿ ಪುರುಷ ನೋಡ ಗೂಡಿ ಹಸಿರಬಿತ್ತಿ ಸಾವಯವದ ಬೆಳೆಯ ಬೆಳೆದು ಇಳಿಯ ಜೈವಿಕ ಕೃಷಿಗೆ ಸಾಕ್ಷಿಯಾದ ಯವ್ವ….. ಚಿಂದಿಯಾದ ಮನಗಳಿಗೆ ದಾರದಲ್ಲಿ ಸೂಜಿಯಾಗಿ ಒಂದು ಮಾಡಿದೆ ಯವ್ವ…..
ಅಂದವಾದ ಕತ್ತಲ ಜಗದಲಿ ಮುದ್ದು ಮಾಡಿ ಧರಣಿಗೆ ಧಾರೆ ಎರೆದ ಧರಣಿ ದೇವಿಗೆ ಬಂಗಾರದ ಮಳೆಯ ಸುರಿಸಿ ಶುಭ ಕೋರಿ ಅಭಿನಂದಿಸುವೆ ನವ್ವ…..
ಅಬ್ಬೆ ನಿನ್ನ ಮೊಬ್ಬು ಗರ್ಭದಿಂದ ಹೊರಗೆ ಬಂದ ಪಾರಿಜಾತ ನಾನಾದೆನವ್ವ…
ಜ್ಞಾನದ ಪರಂಪರೆಯ ಕೃಷಿಗೆ ಸಾಕ್ಷಿಯಾದೆ ನವ್ವ ….
ನನಗೆ ಕೊಟ್ಟ ಜೀವದಾನಕೆ ಕೃತಘ್ನ ಳಾಗಿರುವೆ ನವ್ವ..
ಗೋಲ್ಡನ್ ಶವರ್ ದಿನಕ್ಕೆ ನೀನು ರೂಪ ನಾನು ಪ್ರತಿರೂಪಳಾದೆನವ್ವ….


2 thoughts on “ಕೆ ಜೆ. ಪೂರ್ಣಿಮಾ ಅವರಕವಿತೆ,ಗೋಲ್ಡನ್ ಶವರ್ ಡೇ

Leave a Reply

Back To Top