ಕಾವ್ಯ ಸಂಗಾತಿ.
ಧರೆಗೆ ದೊರೆ
ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಹರಿಯ ಹಿಂದೆ ಹರಿಯಲಿಲ್ಲ
ಹರನ ಶಿರವ ಮುಟ್ಟಲಿಲ್ಲ
ಬ್ರಹ್ಮ ವಿಷ್ಣು ರುದ್ರ
ತೆತ್ತಿಸ ಕೋಟಿ ದೇವರ ನೆನೆಯಲ್ಲಿಲ್ಲ
ಸತ್ಯ ಸಮತೆ ಲಿಂಗವಿಡಿದು
ಹಾಸಿ ದುಡಿದು ಹಂಚಿ ತಿಂದರು
ಸುಳ್ಳುತನ ಹೇಳಲಿಲ್ಲ
ಕಳ್ಳತನ. ಮಾಡಲಿಲ್ಲ
ಪಶು ಪಕ್ಷಿಗಳನ್ನು
ಹಿಂಸೆ ಮಾಡಿ ಕೊಲ್ಲಲಿಲ್ಲ
ಅರಸು ಅಗಸ ಒಮ್ಮೆ ಮಾಡಿ
ನಿತ್ಯ ವಚನ ಹಾಡಿ ಪಾಡಿ
ಪ್ರೀತಿ ಶಾಂತಿ ಮಂತ್ರ ಜಪಿಸಿ
ಧರೆಗೆ ದೊರೆ ಎನಿಸಿತು
ನನ್ನ ದಿಟ್ಟ ಶರಣರು

——————————————————————————————————
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಧರೆಗೆ ದೊರೆ….ನನ್ನ ದಿಟ್ಟ ಶರಣರು ಎನ್ನುವ ಅಭಿಮಾನ ಮತ್ತು ನಿಜವಾದ ಕಳಕಳಿಯಿಂದ ಮೂಡಿಬಂದ ಕವನ… ಸ್ವಲ್ಪದರಲ್ಲಿಯೇ ಶರಣರ ಬಗೆಗೆ ಎಲ್ಲವನ್ನೂ ಅರಹುವಂತಹ ಒಂದು ಅದ್ಭುತ ಕವನ
ಸುಧಾ ಶಿವಾನಂದ
( ಸುಶಿ )
ಅರ್ಥ ಪೂರ್ಣ ಕವನ ಸರ್
ಶರಣರ ದಿವ್ಯ ಪ್ರಸಾದದ ಅನುಭಾವ ಆಯ್ತು ಸರ್
ಶರಣರ ದಿವ್ಯ ಸಂದೇಶವನ್ನು ಸಾರುವ ಕವನ
ಅತ್ತ್ಯುತ್ತಮ ಕವನ ಸರ್
Beautiful poem