ಶೋಭಾ ಮಲ್ಲಿಕಾರ್ಜುನ್ ಅವರ ಕವಿತೆ-ಅಲ್ಲಮ…..

 ಮಲೆನಾಡಿನ ರಮ್ಯ ತಾಣ ಬಳ್ಳಿಗಾವಿಯ ಸುಜ್ಞಾನಿ ನಿರಹಂಕಾರ ದಂಪತಿಗಳ ತೇಜೋಮಯ ತನಯ
ಅನುಭಾವಿಗಳ ನುಡಿಯಲ್ಲಿರುವ ಘನ ಮಹಿಮ
ಚಿತ್ಕಳೆಯ ಚಿದ್ಬಿಂದುವಾದ ಅಪ್ರತಿಮ
ಮದ್ದಳೆಯ ಮಾಯಾವಿ
ತನ್ನ ತಾ ಅರಿಯೆಂದ ಅನುಭಾವಿ
ಶಿವತತ್ವ ಶಿವಜ್ಞಾನ ಮೋಕ್ಷ
ಶೂನ್ಯ ಪೀಠಾಧ್ಯಕ್ಷ
ಅನಿಮಿಷರಿಂದ ಪಡೆದರೂ ಲಿಂಗದೀಕ್ಷೆ
ನಿರಾಕಾರ ನಿಲುವೇ ನಿನಗೆ ಶ್ರೀರಕ್ಷೆ
ಗೊಗ್ಗಯ್ಯನಿಗೆ ಭಕ್ತಿ ಮಾರ್ಗ
ಮುಕ್ತಾಯಕ್ಕನಿಗೆ ಮುಕ್ತಿ ಮಾರ್ಗ ತೋರಿದೆ
ವಿಶ್ವ ಜ್ಞಾನವ ಹಿಡಿದ ಹಠಯೋಗಿ
ಭಾವಲಿಂಗ ಚಿಂತನೆಯ ಭಕ್ತಿ ಮಾರ್ಗಿ
ಮಹಾದೇವಿಗೆ ಗುರುವಾಗಿ ಸಿದ್ದರಾಮನಿಗೆ ಅಹಂಕಾರ ಮಾಯವಾಗಿ
ಆತ್ಮಜ್ಞಾನ ದೀವಿಗೆ ಬೆಳಗಿದ ಮಹಾಯೋಗಿ
ನೀನೆಂದರೆ ಬೆರಗು ಬೆಡಗಿನ ಬೆಳಗು
ಕಾಮಲತೆಯ ಮಾನಸಿಕ ಪತಿ
ಅನುಭವ ಮಂಟಪದ ಪೀಠಾಧಿಪತಿ
ಅವಿಶ್ರಾಂತ ಅಲೆಮಾರಿ ವಚನ ಕ್ರಾಂತಿಯ ರೂವಾರಿ
ಆಧ್ಯಾತ್ಮದ ಸಿಡಿಲೇ ಗುಹೇಶ್ವರ ಅಂಕಿತದ ನಿರ್ಮಾಯೆ
ನಿಮ್ಮನರಿಯಲು ಸಾಕೇ ಹರಿಹರನ ರಗಳೇ
ಚಾಮರಸನ ಪ್ರಭುಲಿಂಗಲೀಲೆ….

Leave a Reply

Back To Top