ಕಾವ್ಯ ಸಂಗಾತಿ
ಸವಿತಾ ದೇಶಮುಖ್
ವಸುರಾಜ


ಚೈತ್ರ -ವೈಶಾಖ ಮಾಸಗಳ ಮಿಲನ
ಮಧ್ಯ – ವಸಂತನ ನವ್ಯ ಗಾನ
ಋತುಗಳ ರಾಜನ ಆಗಮನ-ಅಗಮ್ಯ…
ಎಂಥ ಚಿಗುರು ..ಹೊಚ್ಚ ಹೊಸತನ…
ಥರಗುಟ್ಟಿಸುವ ಚಳಿಯ ದಾಟಿ
ಬೇಸಿಗೆ ಬಿಸಿಲಿನ ಆಗಮದ ಓಟ
ನಡುವಣ ವಸಂತನ ಒಡನಾಟ…
ಎಂಥ ಬಣ್ಣವಸಿರದ ಅಚ್ಚು ಹಸಿರು ಸಿರಿ….
ಭೂವಿ ಅಕ್ಷಯ ಸೂರ್ಯನೆಡೆ
ವಾಲುತಿರೆ, ಧರೆ ಹೊಸ ಚಿಗುರಿನೆಡೆ
ಉದುರಿ ಒಣ ಎಲೆ -ಪುನರ್ಬೆಳುವಿನಡೆ
ಎಳೆ ಚಿಗುರು ಪುನರುತ್ಥಾನ ಒಡಲು..
ಕಂಗಳಿಗೆ ತಂಪನು ಇಯಿಯುತಿರೆ
ಮಾವು -ಹೊಂಗೆ -ಬಾಳೆ- ಮರ
ಗಿಡ -ಬಳ್ಳಿಗಳು ಸೊಂಪಾದ ಬೆಳೆ…
ಗಾಢ ಹಳದಿ ಹೂವುಗಳ ಹಂದರ ….
ಗೂಡು -ಬಿಲಗಳಲ್ಲಿ ಹಕ್ಕಿ- ಪಕ್ಷಿಗಳ
ಇಂಚರ ,ಕೋಗಿಲೆ ಪಕ್ಷಿಗಳ ಕುಹೂಕುಹು
ಗುಟ್ಟುವ ನಾದ ಲಹರಿ ಅಮೃತಾನಂದ…
ಅದ್ಭುತ ವಸುರಾಜನ ಬೃಂದಾವನ….
ನವ ಪ್ರೇಮಿಗಳ ಹೃದಯ ಗಾನ….
ಒಲುಮೆ-ಎದೆಯ ಮೊಗ್ಗು ಅರಳಿಸಿ
ಕಟ್ಟಿ ನವ್ಯ ಪ್ರೇಮಲೋಕ-ಕಾವ್ಯ
ನವ ಪ್ರೇಮಕ್ಕೆ ನಾಂದಿಹಾಡುವ ಘಳಿಗೆ…..
ರೈತನ ಹೊಲ ಬೆಳೆಯ ರಾಶಿ -ಹಾಸಿ
ಸೂರ್ಯಕಾಂತಿ- ಅಗಸೆ- ಸಾಸಿವೆ…
ಮರೆಯಿಸಿ ರೈತನ ಚಿಂತೆ-ಚಿತೆ……
ಉತ್ಸಾಹ -ಹುಮ್ಮಸದ ಕಂತೆ……
ಎನಿತು ಬಣ್ಣಿಸಲಿ ವಸಂತ ರಾಜನ….
ನುಲಿಯುತಿರೆ ಉನ್ಮಾದದಲ್ಲಿ ವಸಂತನು,
ಬಿಗುತಿರೆ ಬಿಗುಮಾನದಲಿ
ನವ ಪ್ರೇಮಿಗಳ ಮಿಲನದಂತೆ….
ಹಕ್ಕಿ-ಪಕ್ಷಿಗಳ ಚಿಲಿಪಿಲಿ ವಾದ್ಯ
ನಿಸರ್ಗದ. ಮತ್ತೇರಿದ ಸೌಂದರ್ಯ
ರೈತನ ಬೆಳೆ ರಾಶಿ-ಹಾಸಿಗೆಗಳ ….ಮದ್ಯ
ಜೀವನದ ಹೊಸ ಉತ್ಥಾನ ವಸಂತ ರಾಜನ ರಾಜ್ಯ..”ವಸುಧೇಯು”..
————————–
ಸವಿತಾ ದೇಶಮುಖ್
ಸುಂದರ ಕವಿತೆ ಆದರೆ ವಾಸ್ತವದಿಂದ ಸ್ವಲ್ಪ ದೂರ
ಧನ್ಯವಾದಗಳು, ಕವಿತೆ ಎಂದರೆ ಕಾಲ್ಪನಿಕ ಸುಂದರ ವಾಸ್ತವತೆಯಿಂದ ದೂರವಾದಾಗ ಆನಂದ ಸಿಗುವುದಲ್ಲವೇ……..