ಶಾರದಜೈರಾಂ.ಬಿ ಅವರ ಕವಿತೆ ʼಯುಗಾದಿ ಚಂದಿರʼ

ಬಂದಿದೆ ಹೊಸ ವರುಷ
ತಂದಿದೆ ನವ ಹರುಷ
ಹೆಸರೇ ಅನ್ವರ್ಥ ಅಲ್ಲವೇ
ವರುಷದ ಮೊದಲ ದಿನ



ಸೃಷ್ಟಿಯ ಸೊಬಗೇ ಸುಂದರ
ಅದ ಕಂಡು ಮನ ಮಂದಾರ
ಹೂ ಬಿರಿದು ನಕ್ಕಿವೆ
ಹಸಿರ ಹೊದಿಕೆ ಹಾಸಿದೆ

ದ್ವೇಷದ ಕಹಿ ತೊಲಗಲಿ
ಪ್ರೀತಿಯ ಸಿಹಿ ಹಂಚೋಣ
ಮಾತ್ಸರ್ಯ ದೂರಾಗಲಿ
ಭಾವೈಕ್ಯತೆ ಮೈಗೂಡಲಿ



ತನುವಿಗೆ ಎಣ್ಣೆಯ ಮಜ್ಜನ
ಮನಕೆ ಸಿಹಿಯ ಹೂರಣದ ಸವಿ
ಮನೆಗೆ ಹಚ್ಚಹಸಿರ ತೋರಣ
ಅಂಗಳಕ್ಕೆ ರಂಗಾದ ರಂಗೋಲಿ

ಕಾತರದಿ ಕತ್ತು ಕೊಂಕಿಸಿ
ಬಾನಲ್ಲಿ ಚಂದಿರನ ಕಂಡು
ಹಿರಿಕಿರಿಯರಿಗೆ ವಂದಿಸಿ
ಭವಿಷ್ಯಕ್ಕೆ ಭರವಸೆ ತುಂಬಿಕೊಳ್ಳುವ

ವಿಶ್ವಾವಸು ಸಂವತ್ಸರ ಸಂಪತ್ತು
ಹೇರಳವಾಗಲಿ ಎಂದಥ೯
ಹಾಗೇಯೇ ವಿಶ್ವಾಸ ವೃದ್ಧಿಸಲಿ
ಬಾಳಿನ ಸಂಪತ್ತೇ ವಿಶ್ವಾಸ

——————————————————————————————————-

2 thoughts on “ಶಾರದಜೈರಾಂ.ಬಿ ಅವರ ಕವಿತೆ ʼಯುಗಾದಿ ಚಂದಿರʼ

Leave a Reply

Back To Top