ಸಿದ್ದಲಿಂಗಪ್ಪ ಬೀಳಗಿ ಅವರ ತನಗಗಳು


ಯುಗಾದಿಯ ಹಬ್ಬಕೆ
ಹೊಸತು ಸಂವತ್ಸರ
ಮರೆಯೋಣ ನಾವೆಲ್ಲ
ಹಿಂದಿನೆಲ್ಲ ಮತ್ಸರ

ವಸಂತಾಗಮನಕೆ
ಹೊಂಗೆ ಹೂವಿನ ಘಮ
ದುಂಬಿಗಳ ದಾಂಗುಡಿ
ಸಂಗೀತದ ಸಂಭ್ರಮ

ಸುಖಗಳಾಗುವುದು
ಬೇವು ಬೆಲ್ಲಗಳಂತೆ
ಯುಗಾದಿ ನೆಪದಲಿ
ಬಿಡೋಣ ಎಲ್ಲ ಚಿಂತೆ

ಬೋಳಾದ ಮರತುಂಬ
ಚಿಗುರಿನ ತೋರಣ
ಮೊಗ್ಗು ಹೂವಿನ ಮಧ್ಯೆ
ಮಿಡಿಕಾಯಿ ಕಂಕಣ

ಒಣಗಿದ ಮರದಿ
ಹಸಿರಿನ ಹಂದರ
ಶಿಶಿರದ ಮೌನಕೆ
ವಸಂತದ ಉತ್ತರ

ಸಿಹಿ ಕಹಿಗಳು
ಬದುಕಿನ ಹೂರಣ
ಸಂತಸ ಬದುಕಿಗೆ
ಸಮಚಿತ್ತ ಕಾರಣ
—————————————-
——————————————————–

One thought on “ಸಿದ್ದಲಿಂಗಪ್ಪ ಬೀಳಗಿ ಅವರ ತನಗಗಳು

Leave a Reply

Back To Top