ಎ.ಕಮಲಾಕರ ಅವರ ಗಜಲ್

ಅರಿತು ಹೆಜ್ಜೆ ಇಡು ಕೂಡುತ ಜೊತೆಗೆ
ಬಹುದೂರದ ದಾರಿ ನಡೆ ಹಾಡುತ ಜೊತೆಗೆ

ಒಂಟಿಯಾಗಿರುವೆನೆಂದು ಕೊರಗಲೇಬೇಡ
ನೆನಪುಗಳು ಸಾಗುತಿದೆ ಕಾಡುತ ಜೊತೆಗೆ

ಮೆರವಣಿಗೆ ಉದ್ದಕ್ಕೂ ದುಷ್ಟ ಶಿಷ್ಟ ಶಕ್ತಿ
ಹೆಜ್ಜೆಯಿಡು ಅವಲೋಕನ ಮಾಡುತ ಜೊತೆಗೆ

ಹಾರಾಟ ಹೋರಾಟ ಚೀರಾಟ ಕಿವಿಮುಚ್ಚು
ಕಣ್ಣು ತೆರೆದೇ ಸಾಗು ನೋಡುತ ಜೊತೆಗೆ

ಆಸೆ ಆಮಿಷಗಳೆಲ್ಲ ಬಿಟ್ಟು ಬಾ ಕಮಲ್
ಪಯಣಿಸು ಒಳಿತನ್ನೇ ಬೇಡುತ ಜೊತೆಗೆ


One thought on “ಎ.ಕಮಲಾಕರ ಅವರ ಗಜಲ್

Leave a Reply

Back To Top