ದೀಪಾ ಪೂಜಾರಿ ಕುಶಾಲನಗರ ಅವರ ಕವಿತೆ- ಅಮ್ಮನ ನೆನಪು

ಅಮ್ಮ, ನಿನ್ನ ಮಮತೆಯ
ತಟ್ಟೆ ಖಾಲಿಯಾಗಿದೆ,
ನಿನ್ನ ಮಾತಿನ ಸೀತೆಯು
ಮೌನವಾಗಿದೆ.
ಎಲ್ಲಾ ಹಾದಿಗಳೂ
ನಿರ್ಜನವಾಗಿವೆ,
ನೀ ಇಲ್ಲದ ಲೋಕ
ಕತ್ತಲಾಗಿದೆ ನನಗೆ

ನನ್ನ ಜನ್ಮದಿನ ಬಂತು,
ಆದರೆ ನಿನ್ನ ಕರೆ ಇಲ್ಲ,
ನಿನ್ನ ಮಾತುಗಳ ಸಿಹಿಯಿಲ್ಲ.
ಎಲ್ಲರ ಶುಭಾಶಯಗಳು
ಒತ್ತಿ ಬರುತ್ತಿವೆ
ಆದರೆ ನೀನಿಲ್ಲದೆ
ಮನಸ್ಸು ಖಾಲಿಯಾಗಿದೆ.

ನಿನ್ನ ನೆನಪಿನಲ್ಲಿ
ಕಣ್ಣೀರಾಗಿದ್ದೇನೆ,
ನಿನ್ನ ಸ್ಮೃತಿಗಳೇ ನನ್ನ ಬೆಳಕು.
ಅಮ್ಮ, ನೀ ಕಾಣದಿದ್ದರೂ,
ನಿನ್ನ ಪ್ರೀತಿ ಸದಾ ನನ್ನ ಜೊತೆ…
ನಿನ್ನ ನೆನಹು ನಿನ್ನ ನೆನಪು
ನನ್ನ ಜೀವದ ಬೆಳಗು


Leave a Reply

Back To Top