ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಗೆದ್ದು ನಿಲ್ಲುವ ರೀತಿಯು

ಮರೆತು ನಿನ್ನಯ
ನಿನ್ನೆಯ ನೋವು
ಬರುವ ನಾಳೆಯ
ನಗೆ ಸಿಹಿ ಘಳಿಗೆ
ಗಟ್ಟಿ ಗೊಳ್ಳು ಇಂದು
ನಿನ್ನ ಬಾಳಿಗೆ
ಏರು ಪೇರು ದಿಬ್ಬ ದಿಣ್ಣೆ
ಕಲ್ಲು ಮುಳ್ಳಿನ
ನಿನ್ನ ಪಯಣವು
ನಂಜು ನುಂಗಿ
ನಗೆಯ ಬೀರು
ಸ್ನೇಹ ಒಲವು ತಾಯಿ ಬೇರು
ಕಳೆದು ಕತ್ತಲೆ
ಬೆಳೆಗು ಬೆಳೆಯಲಿ
ಶಾಂತಿ ಸಮರಸ ಪ್ರೀತಿಯು
ಎದ್ದು ನಿಂತು ಹೆಜ್ಜೆ ಹಾಕು
ದಿಟ್ಟ ದೂರದ ದಾರಿಯು
ಗೆದ್ದು ನಿಲ್ಲುವ ರೀತಿಯು
————————————————————————————
ಡಾ ಶಶಿಕಾಂತ ಪಟ್ಟಣ ರಾಮದುರ್ಗ

Excellent Romantic Poem Sir
ಗೆದ್ದು ನಿಲ್ಲುವ ರೀತಿಯು…
ಪ್ರತಿಯೊಬ್ಬರಿಗೂ ಒಂದು ರೀತಿಯಲ್ಲಿ ಆಶಾದಾಯಕವಾದ ಮತ್ತು ಭರವಸೆಯುಳ್ಳ
ಕವನವಾಗಿ ಹೊರಹೊಮ್ಮಿದೆ
( ಸುಶಿ )
ಸುಧಾ ಶಿವಾನಂದ
ಭಾವ ಕವಿ ವಿಮರ್ಶಕ ಪ್ರಗತಿಪರ ಚಿಂತಕರ ಕಾವ್ಯ ನಿತ್ಯ ಸುಂದರ
ಉತ್ತಮ ಕವನ ಸರ್
Very nice poem Sir