ಡಾ. ಮೀನಾಕ್ಷಿ ಪಾಟೀಲ್ ಅವರ ಕವಿತೆ ವಸಂತ

ಮಾಾಗಿಯ ಚಳಿ
ಮಾಗಿದಂತೆಲ್ಲ
ಬೆಚ್ಚನೆ ಅವಿತುಕೊಂಡಿದ್ದ
ಕನಸುಗಳು
ಚಿಗುರೊಡೆಯಲು ಕಾತರಿಸುವ
ಭಾವ ಬೀಜಗಳು
ಮೆಲ್ಲನೆ ಜಾರುತ್ತಿದ್ದ ಚಳಿ
ಉತ್ತರ ಧ್ರುವಕೆ
ಚುಂಬನದ ತಂಗಾಳಿ
ಮೂಡಣದ ಕುವರ
ಅಂಬೆಗಾಲಿಡುತ
ಭೂತಾಯಿಯ
ಚುಂಬಿಸುತ್ತ
ಬೆಂಗದಿರ ತಳಿ
ಭೂದೇವಿಯ ಅಂಗಳಕೆ
ತಿಳಿ ಬೆಳದಿಂಗಳ ಸಿಂಗಾರ
ಹವಳದ ಕೆಂಪು
ಮಾವು ಬೇವಿನ ಚಿಗುರು
ಮಲ್ಲಿಗೆಯ ಮಳೆಗರೆವ ಕಂಪು
ಕಾದ ಬಿಸಿಲ ಸುರಿವ
ಪಚ್ಚ ಚಪ್ಪರದ ಲತೆಗಳಿಗೆ
ಜೊನ್ನ ಕದಿರ ಚುಂಬನ
ಚೈತ್ರ ತಂಗಾಳಿ
ಮೈತುಂಬ ಹೂ ಮುಡಿದ
ವಸಂತದ ಸೋಬಾನ
ಕೋಗಿಲೆ ಕಾಜಾಣ
ಗಿಳಿ ಗುಬ್ಬಿ ಪಾರಿವಾಳ
ಕೆಂಬೂತ ನವಿಲುಗಳ
ಮೆರವಣಿಗೆ


Leave a Reply

Back To Top