ಹಮೀದಾಬೇಗಂ ದೇಸಾಯಿ ಅವರ ಕವಿತೆ-ಬಾ..ಮೂಡಿ ಬಿಡು..

ಅದೇಕೋ,
ನೀ ಬಾರದೆ ಹೋಗುವೆ
ನಿನ್ನ ನೆನಪಿಸಿಕೊಂಡಾಗಲೆಲ್ಲ…

ಅದೆಷ್ಟೋ ,
ಅವ್ಯಕ್ತ ಭಾವನೆಗಳು
ಚಿಮ್ಮುತ್ತವೆ
ಎದೆಯ ಒರತೆಯಿಂದ
ನೀನಿಲ್ಲದೆ ಇರುವಾಗ…

ಎಷ್ಟೊಂದು
ರಮಿಸುವೆ ಒಮ್ಮೊಮ್ಮೆ
ನಗಿಸುವೆ , ಅಳಿಸುವೆ ಕೂಡ
ಕೊನೆಗೊಮ್ಮೆ ಮೌನವಾಗಿ ಬಿಡುವೆ…

ಯಾಕೆ ಹೀಗೆ
ಕಾಡುವೆ, ನಿದ್ದೆಗೆಡಿಸುವೆ,
ಕಣ್ಣಾಮುಚ್ಚಾಲೆ ಆಟವಾಡಿಸಿ,
ಮೋಜು ನೋಡುವೆಯಲ್ಲ…

ಬಾ ,
ನನ್ನೊಳಗಿನ ಚೈತನ್ಯವನು
ಭಾವ ಕಲಶದೊಳು ತುಂಬಿ,
ಮೂಡಿಬಿಡು ಹಟ ಮಾಡದೆ,
ನನ್ನ ಮುದ್ದು ಕವಿತೆಯೇ..
ಪ್ರೀತಿಯ ಗೆಳತಿಯೇ..


2 thoughts on “ಹಮೀದಾಬೇಗಂ ದೇಸಾಯಿ ಅವರ ಕವಿತೆ-ಬಾ..ಮೂಡಿ ಬಿಡು..

Leave a Reply

Back To Top