ಕಾವ್ಯ ಸಂಗಾತಿ
ಡಾ ಅನ್ನಪೂರ್ಣ ಹಿರೇಮಠ
ಭಾವ ಭೃಂಗ

ಭಾವ ಭೃಂಗದ ಮೃದಂಗ
ನುಡಿಸುತಿದೆ ನನ್ನಂತರಂಗ
ಬಯಸಿ ಬಯಸಿ ಹೂವಿನಾ ಸಂಗ
ನಾದಾಂತರಂಗದೆ ತಲ್ಲಣ ಅಂಗ ಅಂಗ//
ತೂಗುತಾ ಬಾಳೆ ಹೊಂಗೆ
ತಂಪನೆರೆವಾ ಮಾವು ಬೇವು ತೆಂಗು
ಪರಿಮಳಸೋ ಸಂಪಿ ಮಲ್ಲಿ ಜಾಜಿ
ಮಂಪರಿಸಿ ತಲೆದೂಗಿಸಿ ಭ್ರಮಿಸಿ
ರಮಿಸಿ ರಂಜಿಸಿ ಹಿಡಿಸಿವೆ ಗುಂಗು//
ನನ್ನಾಸೆಯ ತೃಷೆಗೆ ಏರಿ ನಶೆ
ಕರೆದಂತೆ ರಂಗಿನಾಟಕೆ ಉಷೆ
ಭಾಸವಾಗುತಿದೆ ಪ್ರೇಮಕ್ಕೆ ಬರೆದಂತೆ ಭಾಷ್ಯ
ಮೂಕ ಮೌನದೊಳು ನಲಿಯುತ ರಸಗಂಗೆ
ತೃಷೆಯ ನೀಗಿಸಿದಂತೆ ಹರಿವ ತುಂಗೆ//
ಅನುರಾಗದ ತನನ ತನನ
ಮನಸೂರೆಗೊಳ್ಳುವ ಮಧುರ ಗಾನ
ರೋಮಾಂಚನದೇ ಪುಳಕ ಮೈಮನ
ಕದಡಿ ಹೂವಿನ ಚಿತ್ತಗಮನ
ಹೂಡಿ ಕಾಮನಾ ಹೂಬಾಣ ರಂಗೆರಿಸಿ
ನಿಶಬ್ದ ನಿರವತೆಯಲಿ ನಲಿಯುತ
ಅನಂತದೋಳು ಮಿಲನ//
ಡಾ ಅನ್ನಪೂರ್ಣ ಹಿರೇಮಠ
