ಶಾರದಜೈರಾಂ.ಬಿ ಅವರ ಕವಿತೆ-ನಾನು ಹೆಣ್ಣು ಭ್ರೂಣ


ಗಂಡುಮಗು ಬೇಕೆಂಬ ಹಪಾಹಪಿಗೆ
ಹೊಸಕಿಹಾಕಿದ ಹೆಣ್ಣು ಭ್ರೂಣ ನಾನು
ಹೆಣ್ಣು ಬೇಡ ಎಂಬ ನಿದ೯ಯಭಾವ
ಇಲ್ಲ ಗಂಡು ಬೇಕೆಂದು ನನ್ನನ್ನು
ಗಭ೯ದಿ ಮುಗಿಸುವ ಹುನ್ನಾರ
ನನ್ನ ಹೊತ್ತವಳು ಕೊರಗುವಳು
ಮನೆಯವರ ಮಾತಿಗೆ ಮಣಿಯಲೇಬೇಕು
ಅವರ ಪ್ರಕಾರ ನಾನೊಂದು
ಮುಟ್ಟಿನ ಮಾಂಸದ ಮುದ್ದೆ
ಭಾವನೆಗಳಿಲ್ಲದ ಬಡಿತವಷ್ಟೇ
ಕೊಲ್ಲದಿರು ನನ್ನ ಎನ್ನುವ ನನ್ನ
ಕೂಗಿಗೆ ಕಿವಿಯಾಗುವಳು
ಆದರೂ ಅಸಹಾಯಕಿ
ಜೀವ ಭರಿಸಲಾಗುವುದಿಲ್ಲ ಎಂದ
ಮೇಲೆ ಜೀವ ತೆಗೆವ ಹಕ್ಕು ಇದೆಯಾ
ಮಾನವೀಯತೆ ಮರೆತ ಮನುಜರು
ಕ್ಷಮಿಸಲಾರೆನು ನಾನೊಂದು ಮಾಂಸದ ಮುದ್ದೆ ಅವರಿಗಷ್ಟೆ

One thought on “ಶಾರದಜೈರಾಂ.ಬಿ ಅವರ ಕವಿತೆ-ನಾನು ಹೆಣ್ಣು ಭ್ರೂಣ

Leave a Reply

Back To Top