ಕಾವ್ಯ ಸಂಗಾತಿ
ಸವಿತಾ ದೇಶವಮುಖ
ʼತಿರುಗುತಿದೆ ಬೆಂಕಿ ಉಂಡಿʼ


ತಲ್ಲಣಿಸಿದೆ ಜಗ- ಜಂಜಡದೊಳು…
ಗೂಡ- ನಿಗೂಢ ಪ್ರಶ್ನೆಗಳ ಸರಮಾಲೆ
ವಿಸ್ಮಯ ಮಾರ್ನುಡಿ ಉತ್ತರಗಳ ಓಲೆ
ಅರಿತು ಸತ್ಯ ತಳದಾಳಕ್ಕೆ ಇಳಿಯದಲೆ,
ಜಾತಿ-ಲಂಚ- ಮೋಸಗಳ ಜಯಮಾಲೆ
ಸೌಮ್ಯ-ಸರಳ-ಸಜ್ಜನರ ಬದಿಗೊತ್ತಿ
ಕಪಟ- ಉಪಟಳಗಳ ಹೆಡೆಯೆತ್ತಿ …
ಸೌಜನ್ಯ- ಸಾಮ್ಯತೆ ಕೊರಳೊ ಒತ್ತಿ..
ಸಂಚು -ದುಷ್ಟರ ಬಾಳ ಬುತ್ತಿ-ಹೊತ್ತು
ತಿರುಗುತಿದೆ ನಭದಲಿ -ಎಲ್ಲವ ಸುತ್ತಿ….
ಹೊಯ್ದಾಡುತ್ತಿದೆ ತಲೆಯ ಮೇಲೆ ಕಿಡಿ
ಎಲ್ಲವನ್ಹೊತ್ತಿ ಉರಿಯುವ ಬಂಡಿ
ಅಗ್ನಿ-ಎನಿತು ಬಲ್ಲದು ಯಾರ್ಆಹುತಿಗೆ
ಸಲ್ಲುವರು, ಆರು ಅಮಾಯಕರು
ಸಹಜತೆಯಲಿ ಅಗ್ನಿಕಿಚ್ಚು ಕಾರುತಿದೆ …..
ಎಲ್ಲವನು ಎಲ್ಲರನು ಭಸ್ಮವಾಗಿಸಲು
ಉರಿಯುವುದು ಮುಗಿಲೆತ್ತರಕ್ಕೆ ಬೆಂಕಿ
ತನ್ನ ಮೂರನೆ ಕಣ್ಣು ತೆರೆಯುವ
ಹುನ್ನಾರದಲಿ, ನಭ – ಭ್ರಮಣದಲಿ “ಆ”
ಭಯಂಕರ ಬೆಂಕಿ ಆಟದ ಹೆಜ್ಜೆ ಸಪ್ಪಳ
ಕೇಳಿಸದೆ.?ನಾಶ-ವಿನಾಶದ ಮುನ್ನ ಕಣ್ತೆರೆ
ನಿಮ್ಮ ನಿಮ್ಮ ಅಹಂದ ಸಂತೈಸುವಾಟ
ಅಭಿಮಾನ -ಸ್ವಾಭಿಮಾನದ ಆಚೆ ದಾಟಿ
ಯುದ್ಧ- ಕದನದ ವಿಷದ -ಕೂಟ
ವಿನಾಶ-ಸರ್ವನಾಶ ಭರದ- ಓಟ…..
ಮರೆಯದಿರಿ ಮಾನವಿಯತೆ ಸಾರ…
ಉಳಿಸಿ ಭೂಮಿಯು ತೊರೆಯದಂತೆ………
———————————————————————————————————-
ಸವಿತಾ ದೇಶಮುಖ